ದೇಶ

ರಾಜಸ್ತಾನ: ಜು.31ರಿಂದ ಅಧಿವೇಶನ ನಡೆಸಲು ಕೋರಿ ಸಿಎಂ ಅಶೋಕ್ ಗೆಹ್ಲೋಟ್ ರಿಂದ ರಾಜ್ಯಪಾಲರಿಗೆ ಹೊಸ ಪ್ರಸ್ತಾವನೆ

Sumana Upadhyaya

ಜೈಪುರ: ವಿಧಾನಸಭೆ ಅಧಿವೇಶನವನ್ನು ಜುಲೈ 31ರಿಂದ ಆರಂಭಿಸುವಂತೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಹೊಸ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚಾಗಿರುವುದರಿಂದ ಬಹುಮತ ಸಾಬೀತು ಪರೀಕ್ಷೆ ನಡೆಸದೆ ಸದನ ಆರಂಭಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆಯಲ್ಲಿ ಸಿಎಂ ಕೋರಿದ್ದಾರೆ. ಕೊರೋನಾ ವೈರಸ್ ಮತ್ತು ಇತರ ಮಸೂದೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಅಧಿವೇಶನ ಆರಂಭಿಸಬೇಕೆಂಬ ಮುಖ್ಯಮಂತ್ರಿ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯಪಾಲರು, ಪ್ರಸ್ತಾವನೆಯಲ್ಲಿ ದಿನಾಂಕ ಅಥವಾ ಅಧಿವೇಶನ ನಡೆಸಲು ಕಾರಣಗಳನ್ನು ತಿಳಿಸಿಲ್ಲ ಎಂದಿದ್ದರು.

SCROLL FOR NEXT