ದೇಶ

ಚೀನಾದ ಮೇಲೆ ಭಾರತದ ಎರಡನೇ ಡಿಜಿಟಲ್ ಸ್ಟ್ರೈಕ್: ಮತ್ತೆ 47 ಆ್ಯಪ್‌ ನಿಷೇಧ!

Srinivas Rao BV

ಚೀನಾದ ಮೇಲೆ ಭಾರತ ಎರಡನೇ ಬಾರಿಗೆ ಡಿಜಿಟಲ್ ಸ್ಟ್ರೈಕ್ ನಡೆಸಿದ್ದು, ಮತ್ತೆ 47 ಆ್ಯಪ್‌ ನಿಷೇಧ ಮಾಡಿದೆ. 

ಜೂ.29 ರಂದು ಭಾರತ ಮೊದಲ ಬಾರಿಗೆ ಚೀನಾ ಆ್ಯಪ್‌ ಗಳನ್ನು ನಿಷೇಧಿಸಿತ್ತು. ಆದರೆ ಈ 59 ಆ್ಯಪ್‌ ಗಳ ತದ್ರೂಪುಗಳಂತೆ 47 ಆ್ಯಪ್‌ ಗಳು ಕಾರ್ಯನಿರ್ವಹಿಸುತ್ತಿದ್ದವು ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ 47 ಆ್ಯಪ್‌ ಗಳನ್ನು ಮತ್ತೆ ನಿಷೇಧಿಸಿದೆ. 

ಭಾರತ ಸರ್ಕಾರ ತನ್ನ ನಿಷೇಧದ ಆದೇಶಗಳನ್ನು ಪಾಲಿಸುವಂತೆ 59 ಆ್ಯಪ್‌ ಗಳ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹೊಸದಾಗಿ ಆ್ಯಪ್‌ ಗಳನ್ನು ನಿಷೇಧಿಸಲಾಗಿದೆ. 

ಪಿಟಿಐ ಪ್ರಕಟಿಸಿರುವ ವರದಿಯ ಪ್ರಕಾರ ಈ ಹಿಂದೆ ಬ್ಯಾನ್ ಮಾಡಲಾಗಿದ್ದ ಆ್ಯಪ್‌ ಕಂಪನಿಗಳಿಗೆ ಪತ್ರ ಬರೆದಿದ್ದ ಎಲೆಕ್ಟ್ರಾನಿಕ್ಸ್ ಹಾಗೂ ಇನ್ಫಾರ್ಮೇಷನ್ ಟೆಕ್ನಾಲಜಿ ಸಚಿವಾಲಯ, ನಿಷೇಧದ ಹೊರತಾಗಿಯೂ ಆ್ಯಪ್‌ ಗಳು ನೇರ ಅಥವಾ ಪರೋಕ್ಷವಾಗಿ ಲಭ್ಯವಿದ್ದು ಕಾರ್ಯನಿರ್ವಹಣೆ ಮಾಡುತ್ತಿವೆ, ಆದೇಶವನ್ನು ಪಾಲಿಸದೇ ಇದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.

SCROLL FOR NEXT