ಸಂಗ್ರಹ ಚಿತ್ರ 
ದೇಶ

ರಾಮಮಂದಿರ ಕೆಳಗೆ ಕ್ಯಾಪ್ಸೂಲ್ ವರದಿ ಸುಳ್ಳು: ರಾಮಜನ್ಮಭೂಮಿ ಟ್ರಸ್ಟ್

ಉದ್ದೇಶಿತ ಭವ್ಯ ರಾಮ ಮಂದಿರದ ಅಡಿಪಾಯದಲ್ಲಿ, ರಾಮ ಜನ್ಮಭೂಮಿ ಚಳುವಳಿಯ ಇತಿಹಾಸವನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸುವ ವರದಿಗಳನ್ನು ಟ್ರಸ್ಟ್ ಕೇವಲ ವದಂತಿ ಎಂದು ಅಲ್ಲಗಳೆದಿದೆ.

ಅಯೋಧ್ಯೆ: ಉದ್ದೇಶಿತ ಭವ್ಯ ರಾಮ ಮಂದಿರದ ಅಡಿಪಾಯದಲ್ಲಿ, ರಾಮ ಜನ್ಮಭೂಮಿ ಚಳುವಳಿಯ ಇತಿಹಾಸವನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸುವ ವರದಿಗಳನ್ನು ಟ್ರಸ್ಟ್ ಕೇವಲ ವದಂತಿ ಎಂದು ಅಲ್ಲಗಳೆದಿದೆ.

ಇದೇ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದು, ಈ ಮಧ್ಯೆ ದೇವಸ್ಥಾನ ಕಟ್ಟಡದ ಕೆಳಭಾಗದಲ್ಲಿ ರಾಮ ಮಂದಿರಕ್ಕಾಗಿ ನಡೆದ ರಾಮ ಜನ್ಮಭೂಮಿ ಚಳುವಳಿಯ ಇತಿಹಾಸದ ಮಾಹಿತಿಯನ್ನೊಳಗೊಂಡ ಕ್ಯಾಪ್ಸೂಲ್‌ಗಳನ್ನು ಇಡಲು ನಿರ್ಧರಿಸಲಾಗಿದೆ ಎಂಬ ವರದಿ ಸುಳ್ಳು ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಚಂಪತ್ ರಾಯ್  ಸ್ಪಷ್ಟ ಪಡಿಸಿದ್ದಾರೆ.

ಮಂದಿರದ ಮೇಲ್ಮೈಯಿಂದ 200 ಅಡಿ ಕೆಳಗೆ ರಾಮ ಜನ್ಮಭೂಮಿಗಾಗಿ ನಡೆದ ಸುದೀರ್ಘ ಚಳುವಳಿಯ ಇತಿಹಾಸನ್ನು ನೆನಪಿಸುವ ಕ್ಯಾಪ್ಸೂಲ್‌ಗಳನ್ನು ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ರಾಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಬಾಂಗ್ಲಾದವರ ಬಗ್ಗೆ ಮಾಹಿತಿ ಕೊಟ್ಟ 15 ನಿಮಿಷದಲ್ಲೇ ಭಾರತೀಯನ ವಿರುದ್ಧವೇ ಹಲ್ಲೆ ಕೇಸ್: ನಿಮ್ಮ ಓಲೈಕೆ ನಿಲ್ಲಿಸಿ, ಸರ್ಕಾರಕ್ಕೆ ಹೈಕೋರ್ಟ್ ಚಾಟಿ!

ಪಂಜಾಬ್ ವಿವಿಯಲ್ಲಿ ಘೋರ ದುರಂತ: ಕ್ಯಾಂಪಸ್‌ನಲ್ಲೇ ವಿದ್ಯುತ್ ತಗುಲಿ ಪಿಎಚ್‌ಡಿ ವಿದ್ಯಾರ್ಥಿನಿ ಸಾವು; ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

Neet ಪ್ರಶ್ನೆ ಪತ್ರಿಕೆ ಸೋರಿಕೆ: ಅಂಧಭಕ್ತ.. ಈಡಿಯಟ್.. RSS, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ, ಸಂಸತ್ ನಲ್ಲಿ ಹೈಡ್ರಾಮಾ

ಸತತ 2 IPL ಟ್ರೋಫಿ ಗೆಲುವಿನ ಬೆನ್ನಲ್ಲೇ ಗಗನಕ್ಕೇರಿದ RCB ಬ್ರ್ಯಾಂಡ್ ವ್ಯಾಲ್ಯೂ; 4ನೇ ಸ್ಥಾನಕ್ಕೆ ಕುಸಿದ CSK.. ಇಲ್ಲಿದೆ ಫುಲ್ ಲಿಸ್ಟ್