ತಂಬಾಕು ಸೇವನೆಯಿಂದ ಕೋವಿಡ್-19 ಪ್ರಸರಣದ ಅಪಾಯ ಹೆಚ್ಚು: ಆರೋಗ್ಯ ಸಚಿವಾಲಯ! 
ದೇಶ

ತಂಬಾಕು ಸೇವನೆಯಿಂದ ಕೋವಿಡ್-19 ಪ್ರಸರಣದ ಅಪಾಯ ಹೆಚ್ಚು: ಆರೋಗ್ಯ ಸಚಿವಾಲಯ!

ಧೂಮಪಾನ ವ್ಯಸನಿಗಳು ಕೋವಿಡ್-19 ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. 

ನವದೆಹಲಿ: ಧೂಮಪಾನ ವ್ಯಸನಿಗಳು ಕೋವಿಡ್-19 ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. 

ತಂಬಾಕು ಪದಾರ್ಥಗಳ ಸೇವನೆಯಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕುಗಳು ಹೆಚ್ಚಾಗಲಿದ್ದು, ಕೋವಿಡ್-19 ಗೆ ತುತ್ತಾಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ.

ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಕೋವಿಡ್-19 ಸಾಂಕ್ರಾಮಿಕ ಹಾಗೂ ಭಾರತದಲ್ಲಿ ತಂಬಾಕು ಸೇವನೆ ಎಂಬ  ಡಾಕ್ಯುಮೆಂಟ್ ನಲ್ಲಿ ತಜ್ಞರು ಹೇಳಿರುವ ಪ್ರಕಾರ ತಂಬಾಕು ಸೇವನೆಯಿಂದಾಗಿ ಶ್ವಾಸಕೋಶ ಹಾಳಾಗಿರುತ್ತದೆ, ಇಂತಹ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ಸುಲಭವಾಗಿ ತಗುಲುತ್ತದೆ.

ತಂಬಾಕು ಸೇವನೆ, ಧೂಮಪಾನದಿಂದಾಗಿ ಸಾಂಕ್ರಾಮಿಕವಲ್ಲದ ಶ್ವಾಸಕೋಶದ ಸಮಸ್ಯೆಗಳು (ಎನ್ ಸಿಡಿ) ಹೆಚ್ಚಾಗಲಿದ್ದು ಎನ್ ಸಿಡಿಯಿಂದಾಗಿ ಭಾರತದಲ್ಲಿ ಶೇ.63 ಸಾವುಗಳು ಇವುಗಳಿಂದಲೇ ಸಂಭವಿಸುತ್ತಿವೆ. ಕೋವಿಡ್-19 ಸೋಂಕು ತಗುಲಿದರೆ ಈ ರೀತಿಯ ಎನ್ ಸಿಡಿ ರೋಗಗಳು ವ್ಯಕ್ತಿಯಲ್ಲಿ ಮತ್ತಷ್ಟು ಉಲ್ಬಣವಾಗುತ್ತವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT