ದೇಶ

ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಅಡಿಪಾಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಅಮೆರಿಕದ ಟೈಮ್ಸ್ ಸ್ಕ್ವಾರ್ 

Sumana Upadhyaya

ನ್ಯೂಯಾರ್ಕ್: ಮುಂದಿನ ತಿಂಗಳು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಮ ಮಂದಿರ ದೇವಾಲಯದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಟೈಮ್ಸ್ ಸ್ಕ್ವಾರ್ ಸಾಕ್ಷಿಯಾಗಲಿದೆ. 

ಅಯೋಧ್ಯೆಯಲ್ಲಿ ತಲೆಯೆತ್ತಲಿರುವ ರಾಮ ಮಂದಿರದ 3ಡಿ ಚಿತ್ರಗಳನ್ನು, ರಾಮನ ಭಾವಚಿತ್ರಗಳನ್ನು ಅಮೆರಿಕದ ಅಪ್ರತಿಮ ಸಾಂಪ್ರದಾಯಿಕ ಟೈಮ್ಸ್ ಸ್ಕ್ವಾರ್ ನಲ್ಲಿ ಫಲಕಗಳ ಮೂಲಕ ನೇತುಹಾಕಲಾಗುತ್ತದೆ. ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಅಮೆರಿಕದಲ್ಲಿರುವ ಭಾರತೀಯರು ಟೈಮ್ಸ್ ಸ್ಕ್ವಾರ್ ನಲ್ಲಿ ವೀಕ್ಷಿಸಬಹುದು ಎಂದು ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೈರ್ಸ್ ಕಮಿಟಿಯ ಜಗದೀಶ್ ಸೆವ್ಹಾನಿ ತಿಳಿಸಿದ್ದಾರೆ.

ಆಗಸ್ಟ್ 5ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಟೈಮ್ ಸ್ಕ್ವಾರ್ ನಲ್ಲಿ ಜೈ ಶ್ರೀರಾಮ್ ಎಂಬ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬರೆದ ಪದ, ಶ್ರೀರಾಮನ ಚಿತ್ರ ಮತ್ತು ವಿಡಿಯೊಗಳು, ದೇವಾಲಯದ ವಿನ್ಯಾಸದ ಮತ್ತು ವಾಸ್ತುಶಿಲ್ಪದ 3ಡಿ ಭಾವಚಿತ್ರಗಳು ಮತ್ತು ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆ ದಿನ ಟೈಮ್ಸ್ ಸ್ಕ್ವಾರ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಭಾರತೀಯರು ಸೇರಿ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣದ ಅಡಿಪಾಯದ ಸಂಭ್ರಮವನ್ನು ಸಿಹಿತಿಂಡಿ ಹಂಚಿಕೊಂಡು ತಿನ್ನುವ ಮೂಲಕ ಆಚರಿಸಿಕೊಳ್ಳಲಿದ್ದಾರೆ. 

SCROLL FOR NEXT