ದೇಶ

ಭೀಮ್ ಬಳಕೆದಾರರಿಗೆ ಜೋಡಣೆಯಾಗಿದ್ದ 7.26 ಮಿಲಿಯನ್ ದಾಖಲೆಗಳ ಡಾಟಾ ಸೋರಿಕೆ! 

Srinivas Rao BV

ನವದೆಹಲಿ: ಆನ್ ಲೈನ್ ಪಾವತಿ ಆ್ಯಪ್ ಭೀಮ್ ನ ಬಳಕೆದಾರರಿಗೆ ಜೋಡಣೆಯಾಗಿದ್ದ 7.26 ಮಿಲಿಯನ್ ದಾಖಲೆಗಳ ಡಾಟಾ ಸೋರಿಕೆಯಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ. 

ಈ ದಾಖಲೆಗಳ ಮಾಹಿತಿಯನ್ನು ವೆಬ್ ಸೈಟ್ ಒಂದು ಸಾರ್ವಜನಿಕಗೊಳಿಸಿದ್ದು, ಸೂಕ್ಷ್ಮ ಮಾಹಿತಿಗಳಾದ ಹೆಸರು, ಜನ್ಮ ದಿನಾಂಕ, ಮನೆಯ ವಿಳಾಸ, ಆಧಾರ್ ಕಾರ್ಡ್ ವಿವರಗಳು ಇವೆ ಎಂದು ವಿಪಿಎನ್ ರಿವ್ಯೂ ವೆಬ್ ಸೈಟ್ ವಿಪಿಎನ್ ಮೆಂಟರ್ ವರದಿ ಮೂಲಕ ತಿಳಿದುಬಂದಿದೆ. 

ಈ ಸೋರಿಕೆಯಿಂದ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮ ಬೀರಲಿದ್ದು, ಕಳ್ಳತನ, ವಂಚನೆ, ಹ್ಯಾಕರ್ ಗಳು, ಸೈಬರ್ ಕ್ರಿಮಿನಲ್ ಗಳ ದಾಳಿಗೆ ದಾರಿ ಮಾಡಿಕೊಡಲಿವೆ ಎಂದು ಭದ್ರತಾ ಸಂಶೋಧಕರು ಎಚ್ಚರಿಸಿದ್ದಾರೆ. 

SCROLL FOR NEXT