ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಳ್ಳಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿರುವ ಪ್ರಧಾನಿ ಮೋದಿ 
ದೇಶ

ಕೊರೋನಾ ವೈರಸ್ ಗೋಚರ ಮತ್ತು ಅಗೋಚರಗಳ ನಡುವಣ ಸಮರ: ಪ್ರಧಾನಿ ಮೋದಿ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಅಗೋಚರವೇ ಆಗಿರಬಹುದು. ಆದರೆ, ಇದರ ವಿರುದ್ಧ ಹೋರಾಟ ಮಾಡುವ ವೈದ್ಯಕೀಯ ಸಿಬ್ಬಂದಿಗೆ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಅಗೋಚರವೇ ಆಗಿರಬಹುದು. ಆದರೆ, ಇದರ ವಿರುದ್ಧ ಹೋರಾಟ ಮಾಡುವ ವೈದ್ಯಕೀಯ ಸಿಬ್ಬಂದಿಗೆ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. 

ದೇಶದಲ್ಲಿಯೇ ಅತ್ಯಂತದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಎಂದು ಖ್ಯಾತಿ ಪಡೆದಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಳ್ಳಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ರನ್ನು ಕೊಂಡಾಡಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲತ ಮಾತನಾಡಿರುವ ಅವರು, ಎರಡು ವಿಶ್ವ ಯುದ್ಧಗಳ ನಂತರದ ಇದೀ ಇಡೀ ಪ್ರಪಂಚವೇ ಕೊರೋನಾ ಎಂಬ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ಎಂಬುದು ಜಾಗತಿಕ ಯುದ್ಧ ಇದ್ದಂತೆಯೇ, ವೈದ್ಯಕೀಯ ಸಿಬ್ಬಂದಿ ಈ ಯುದ್ಧದಲ್ಲಿ ಸೈನಿಕರಂತೆ ಹೋರಾಟ ನಡೆಸುತ್ತಿದ್ದಾರೆ. ಸೈನಿಕರಂತೆ ಸಮವಸ್ತ್ರ ಇಲ್ಲ ಎನ್ನುವುದನ್ನು ಬಿಟ್ಟರೆ ಇವರ ಹೋರಾಟ ಮಾತ್ರ ಅತ್ಯಂತ ಶ್ಲಾಘನಾರ್ಹವಾದುದು. ಎಂದು ಹೇಳಿದ್ದಾರೆ.

ಇದೇ ವೇಳೆ ಕೊರೋನಾ ವಾರಿಯರ್ಸ್ ವಿರುದ್ದ ನಡೆಸುತ್ತಿರುವ ದೌರ್ಜನ್ಯಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕೊರೋನಾ ವಾರಿಯರ್ಸ್ ವಿರುದ್ಧದ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಕೊರೋನಾ ವಾರಿಯರ್ಸ್'ಗೆ ರೂ.50 ಲಕ್ಷ ವಿಮಾ ಸೌಲಭ್ಯ ನೀಡುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 

ಕೊರೋನಾ ವೈರಸ್ ಕಣ್ಣಿಗೆ ಕಾಣಿಸುವುದಿಲ್ಲ ಇದು ಅಗೋಚರವಾದದ್ದು. ಆದರೆ, ಇದರ ವಿರುದ್ಧ ಹೋರಾಟ ಮಾಡುವ ವೈದ್ಯಕೀಯ ಸಿಬ್ಬಂದಿಗೆ ನಮಗೆ ಗೋಚರಿಸುತ್ತಾರೆ. ಆದ್ದರಿಂದ ಕೊರೋನಾ ವೈರಸ್ ಗೋಚರ ಮತ್ತು ಅಗೋಚರ ನಡುವಿನ ಯುದ್ಧ ಇದ್ದ ಹಾಗೆ. ಆದರೆ, ಇದನ್ನು ನಮ್ಮ ವೈದ್ಯಕೀಯ ಸಿಬ್ಬಂದಿಗಳು ಸಮರ್ಥವಾಗಿ ನಿರ್ವಹಿಸುತ್ತಿರುವುದಕ್ಕೆ ಸಂತೋಷವಿದೆ ಎಂದಿದ್ದಾರೆ. 

ಭಾರತದ ಜನತೆಯ ಆರೋಗ್ಯಕ್ಕಾಗಿ ನಮ್ಮ ಸರ್ಕಾರ ಆರಂಭಿಸಿರುವ ಆಯುಷ್ಮಾನ್ ಭಾರತ್ ಇಗಾಗಲೇ 1 ಕೋಟಿ ಜನರನ್ನು ತಲುಪಿದೆ. ಅದೇ ರೀತಿ ಮಿಷನ್ ಇಂದ್ರಧನುಷ್ ನಿಂದ ಲಕ್ಷಾಂತರ ಜನರು ಪ್ರಯೋಜನೆ ಪಡೆದಿದ್ದಾರೆ. ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಶುರು ಮಾಡಿರುವ ಆರೋಗ್ಯ ಸೇತು ಆ್ಯಪ್ ವಿಶ್ವದಲ್ಲಿಯೇ ಮಹತ್ವದ ಪ್ರಯೋಗ ಆಗಿದ್ದು, ಈಗಾಗಲೇ 12 ಕೋಟಿ ಜನರು ಇದನ್ನು ಡೌನ್'ಲೋಡ್ ಮಾಡಿಕೊಂಡಿದ್ದಾರೆ. 

ಸ್ವದೇಶಿ ಚಳವಳಿ ಕೂಡ ಏರುಗತಿಯಲ್ಲಿ ಸಾಗಿದ್ದು, ಇದಾಗಲೇ ಪಿಪಿಇ ಕಿಟ್ ಸೇರಿದಂತೆ ಅನೇಕ ವೈದ್ಯಕೀಯ ಸಲಕರಣೆಯನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿ ರೂಪಿಸಲಾಗಿದೆ. ಇವೆಲ್ಲವೂ ಆರೋಗ್ಯ ಕ್ಷೇತ್ರದಲ್ಲಿ ಭಾರತ ಸದಾ ಮುಂದಿದೆ ಎಂಬುದನ್ನು ತೋರಿಸುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT