ದೇಶ

ಕೇರಳಕ್ಕೆ ಮುಂಗಾರು ಆಗಮನ, ಎರಡು ದಿನಗಳಲ್ಲಿ ರಾಜ್ಯದಲ್ಲೂ ಮಳೆಗಾಲ ಪ್ರಾರಂಭ

Raghavendra Adiga

ತಿರುವನಂತಪುರಂ:  ನೈಋತ್ಯ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿದೆ ಎಂದು , ಭಾರತ ಹವಾಮಾನ ಇಲಾಖೆ (ಐಎಂಡಿ) ದೃಢಪಡಿಸಿದೆ. ಜೂನ್ 1ರಂದು ಕೇರಳ ಪ್ರವೇಶಿಸಿರುವ ಮುಂಗಾರು ಇನ್ನೂ  ಮಂಗಳವಾರ ಇಲ್ಲವೆ ಬುಧವಾರ ರಾಜ್ಯಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು ಮುಂಗಾರು ಘೋಷಣೆಗೆ ಅಗತ್ಯ ಮಾನದ್ಂಡಗಳ ಘೋಷಣೆಯಾಗಿದೆ  ಎಂದು ಐಎಂಡಿ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣ ಕೇರಳದಲ್ಲಿ ಭಾರೀ ಮಳೆಯಾಗಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮಾನ್ಸೂನ್ ಆಗಮನಆಗಲಿದೆಂದು ಐಎಂಡಿ ಹೇಳಿದೆ.

ಮಂಗಳವಾರ ಇಲ್ಲವೇ ಬುಧವಾರ ರಾಜ್ಯ ಪ್ರವೇಶಿಸುವ ಮುಂಗಾರಿನ ಪರಿಣಾಮ ಮೂರು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ  ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಂಭವವಿದೆ.

ಈ ಮೊದಲು, ಜೂನ್ 5 ರೊಳಗೆ ಮಾನ್ಸೂನ್ ಆಗಮನವಾಗಲ್ಲ ಎನ್ನಲಾಗಿತ್ತು. ಈಗ ನಾಲ್ಕು ದಿನಗಳ ಮುನ್ನ ಎಂದರೆ ಜೂನ್ 1 ಕ್ಕೆ ಕೇರಳಕ್ಕೆ ಆಗಮಿಸಿದೆ.2019 ರಲ್ಲಿ, ಮಾನ್ಸೂನ್ ಸಾಮಾನ್ಯ ಪ್ರಾರಂಭದ ದಿನಾಂಕದ ಒಂದು ವಾರದ ನಂತರ ಜೂನ್ 8 ರಂದು ಕೇರಳಕ್ಕೆ ಆಗಮಿಸಿತ್ತು. ಐಎಂಡಿ ಹೊರಡಿಸಿದ ಹವಾಮಾನ ವರದಿಯು ಒಂಬತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿವೆ.

SCROLL FOR NEXT