ದೇಶ

ಕೊರೋನಾ ಚೆಲ್ಲಾಟ: ಎರಡು ಬಾರಿ ಮದುವೆ ಮುಂದೂಡಿ ಹೈರಾಣಾದ ವ್ಯಕ್ತಿ

Manjula VN

ಕೊಯಿಮತ್ತೂರು: ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದ ಜೋಡಿಗಳ ಕನಸುಗಳಿಗೆ ತಣ್ಣೀರು ಎರಚಿದೆ, ಕೊರೋನಾ ಪರಿಣಾಮ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ಎರಡು ಬಾರಿ ಮದುವೆ ಮುಂದೂಡಿ ಹೈರಾಣಾಗಿ ಹೋಗಿದ್ದಾರೆ. 

ಮೇ.31ರಂದು ಚೆನ್ನೈನಿಂದ ಕೊಯಿಮತ್ತೂರಿಗೆ ಆಗಮಿಸಿದ್ದ 28 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ಮೇ.20 ರಂದು ಮದುವೆ ನಿಶ್ಚಯವಾಗಿದ್ದ ಮದುವೆ ಲಾಕ್'ಡೌನ್ ಪರಿಣಾಮ ಮುಂದೂಡಲಾಗಿತ್ತು. ಇದಾದ ಬಳಿಕ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಮದುವೆ ಮುಂದೂಡಲಾಗಿತ್ತು. ಇದೀಗ ಜೂನ್ 10ಕ್ಕೆ ಮದುವೆಯನ್ನು ನಿಶ್ಚಯ ಮಾಡಲಾಗಿದೆ. 

ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ವ್ಯಕ್ತಿ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮೇ.20 ರಂದು ಕೊಯಿಮತ್ತೂರಿನಲ್ಲಿ ಮದುವೆ ನಿಶ್ಚಯವಾಗಿತ್ತು. ಲಾಕ್'ಡೌನ್ ಪರಿಣಾಮ ಮದುವೆಯನ್ನು ಮುಂದೂಡಲಾಗಿತ್ತು. ಬಳಿಕ ನನಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಮದುವೆಯನ್ನು ಮುಂದೂಡಲಾಗಿತ್ತು. ಈ ಕುರಿತು ಹುಡುಗಿಯ ಮನೆಯವರಿಗೆ ಮಾಹಿತಿ ನೀಡಿದ್ದೆವು. ಅವರನ್ನು ಒಪ್ಪಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇದೀಗ ವೈದ್ಯರು ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ. ಆದಷ್ಟು ಬೇಗ ಗುಣಮುಖನಾಗುತ್ತೇನೆಂಬ ವಿಶ್ವಾಸ ನನಗೂ ಇದೆ ಎಂದು ಶಂಕರ್ ಹೇಳಿದ್ದಾರೆ. 

ಇದೇ ವೇಳೆ ಸೋಂಕು ಯಾವ ರೀತಿ ತಗುಲಿರಬಹುದು ಎಂಬ ಪ್ರಶ್ನೆಗ ಉತ್ತರಿಸಿದ ಅವರು, ಮನೆಯ ಬಳಿಯೇ ಇದ್ದ ಎಟಿಎಂಗೆ ತೆರಳಿದ್ದೆ. ಅಲ್ಲಿ ಯಾವುದೇ ರೀತಿಯ ಸ್ಯಾನಿಟೈಸರ್ ಗಳಿರಲಿಲ್ಲ. ಇದರಿಂದಲೇ ನನಗೆ ಸೋಂಕು ಬಂದಿರಬಹುದು ಎಂದಿದ್ದಾರೆ. 

ಎಟಿಎಂಗೆ ಬಹಳಷ್ಟು ಜನರು ಬಂದು ಹೋಗುತ್ತಿರುತ್ತಾರೆ. ಅಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳಿರಲಿಲ್ಲ. ಕೊಯಿಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗಲೂ ನನಗೆ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಆದರೆ, ನಂತರ ದಿನಗಳಲ್ಲಿ ವೈರಸ್ ದೃಢಪಟ್ಟಿತ್ತು. 

ಬಳಿಕ ಶಂಕರ್ ಅವರ ತಾಯಿಯವರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅವರಲ್ಲಿ ಯಾವುದೇ ರೀತಿಯ ಸೋಂಕು ದೃಢಪಟ್ಟಿಲ್ಲ. ಆದರೂ ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT