ದೇಶ

ಜಮಾತ್  ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 960 ವಿದೇಶಿ ತಬ್ಲಿಘಿಗಳಿಗೆ 10 ವರ್ಷ ನಿಷೇಧ!

Raghavendra Adiga

ನವದೆಹಲಿ: ತಬ್ಲಿಘಿ ಜಮಾತ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 960 ವಿದೇಶಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ 10 ವರ್ಷಗಳ ಕಾಲ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ವಿದೇಶಿ ಪ್ರಜೆಗಳು ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊರಡಿಸಲಾದ ವೀಸಾ ಷರತ್ತುಗಳನ್ನು ಉಲ್ಲಂಘಿಸಿ, ಮಿಷನರಿ ಚಟುವಟಿಕೆಗಳಲ್ಲಿ ಅಕ್ರಮವಾಗಿ ಬಾಗವಹಿಸಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಏಪ್ರಿಲ್ ನಲ್ಲಿ ನಿಜಾಮುದ್ದೀನ್ ಮರ್ಕಜ್ ಧಾರ್ನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ತಬ್ಲಿಘಿ ಜಮಾತ್  ಸದಸ್ಯರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿತ್ತು. ಆ ನಂತರ ಅವರ ದೇಶಾದ್ಯಂತದ ಸಂಚಾರದ ಪರಿಣಾಮ ದೇಶದ ನಾನಾ ಭಾಗಗಳಿಅಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದವು.

ನಿಜಾಮುದ್ದೀನ್‌ನಲ್ಲಿನ ಧಾರ್ಮಿಕ ಸಭೆಯಲ್ಲಿ ವಿದೇಶಿ ಪ್ರಜೆಗಳು ಸೇರಿದಂತೆ ಕನಿಷ್ಠ 9,000 ಜನರು ಭಾಗವಹಿಸಿದ್ದರು. ಆ ನಂತರದ ದಿನಗಳಲ್ಲಿ ದೇಶದಲ್ಲಿ ಹಾಜರಿದ್ದ ಅನೇಕರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿದರು.ಪೊಲೀಸರ ಪ್ರಕಾರ, ಈ ವಿದೇಶಿ ಪ್ರಜೆಗಳು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದ್ದರು ಮತ್ತು ಮರ್ಕಜ್ ನಲ್ಲಿ  ನಡೆದ ಕೂಟದಲ್ಲಿ ಅಕ್ರಮವಾಗಿ ಭಾಗವಹಿಸಿದ್ದರು.

SCROLL FOR NEXT