ದೇಶ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೋನಾ ಸೋಂಕು-ವರದಿ, 'ಇಲ್ಲ' ಎನ್ನುತ್ತಿದ್ದಾನೆ ಆತನ ಸಹೋದರ!

Srinivas Rao BV

ಕರಾಚಿ: ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ ಹಾಗೂ ಆತನ ಪತ್ನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನುತ್ತಿವೆ ಸುದ್ದಿ ವಾಹಿನಿಗಳ ವರದಿಗಳು. 

ಆದರೆ ಈ ಬಗ್ಗೆ ಡಿ-ಕಂಪನಿ ನಿರ್ವಹಣೆ ಮಾಡುತ್ತಿರುವ ದಾವೂದ್ ಇಬ್ರಾಹಿಂ ನ ಸಹೋದರ ಅನೀಸ್ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ದಾವೂದ್ ಇಬ್ರಾಹಿಂ ಗೆ ಕೊರೋನಾ ಸೋಂಕು ತಗುಲಿಲ್ಲ ಎಂದು ಹೇಳುತ್ತಿದ್ದಾನೆ. ಸುದ್ದಿ ಸಂಸ್ಥೆ ಐಎಎನ್ಎಸ್ ಜೊತೆಗೆ ಮಾತನಾಡಿರುವ ಅನೀಸ್ ಇಬ್ರಾಹಿಂ, ತನ್ನ ಸಹೋದರನಿಗೆ ಕೊರೋನಾ ಸೋಂಕು ತಗುಲಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೇ ಪಾಕಿಸ್ತಾನ, ಯುಎಇಗಳಲ್ಲಿ ಡಿ-ಕಂಪನಿ ಉದ್ಯಮ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ

ಗುಪ್ತಚರ ಮಾಹಿತಿಯ ಪ್ರಕಾರವೂ ದಾವೂದ್ ಇಬ್ರಾಹಿಂಗೆ ಕೊರೋನಾ ಸೋಂಕು ತಗುಲಿದ್ದು ಆತನ ಸಿಬ್ಬಂದಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 1993ರ ಬಾಂಬೆ ಸ್ಫೋಟ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾಗಿದ್ದು ಆತನ ವಿರುದ್ಧ ಇಂಟರ್ ಪೋಲ್ ನೊಟೀಸ್ ಜಾರಿಗೊಂಡಿದೆ. 

ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ದಾವೂದ್ ಇಬ್ರಾಹಿಂಗೆ ಚಿಕಿತ್ಸೆ ಲಭ್ಯವಾಗುತ್ತಿದೆ ಎಂಬ ಮಾಹಿತಿ ಇದೆ. 

SCROLL FOR NEXT