ದೇಶ

ಸರ್ಕಾರ ಆರ್ಥಿಕತೆಯನ್ನು ಹಾಳುಗೆಡವುತ್ತಿದೆ: ರಾಹುಲ್ ಗಾಂಧಿ 

Srinivas Rao BV

ನವದೆಹಲಿ: ಸಣ್ಣ, ಮಧ್ಯಮ ಉದ್ಯಮಗಳಿಗೆ, ಜನಸಾಮಾನ್ಯರಿಗೆ ನಗದು ನೆರವು ನೀಡುವುದಕ್ಕೆ ನಿರಾಕರಿಸುವ ಮೂಲಕ ಸರ್ಕಾರ ದೇಶದ ಆರ್ಥಿಕತೆಯನ್ನು ಹಾಳುಗೆಡವುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ 2.೦ ಆಡಳಿತಾವಧಿಯನ್ನು ರಾಕ್ಷಸ 2.0 ಎಂದು ಹೇಳಿರುವ ರಾಹುಲ್ ಗಾಂಧಿ, ಕೊರೋನಾ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವುದಕ್ಕೆ ಬಡವರಿಗೆ 10,000 ನಗದು ಹಾಗೂ ಎಂಎಸ್ಎಂಇ ಇಂಡಸ್ಟ್ರಿಗೆ ಈ ಪರಿಸ್ಥಿತಿಯಿಂದ ಹೊರಬರಲು ಉತ್ತೇಜನ ಪ್ಯಾಕೇಜ್ ಘೋಷಿಸಬೇಕೆಂಬುದು ರಾಹುಲ್ ಗಾಂಧಿ ಅವರ ಬೇಡಿಕೆಯಾಗಿದೆ. 

ಜನತೆಗೆ ನಗದು ನೆರವು ನೀಡದ ಸರ್ಕಾರ ಮಾಡುತ್ತಿರುವ ಅಪರಾಧ ಎಂದು ಈ ಹಿಂದೆಯೂ ರಾಹುಲ್ ಗಾಂಧಿ ಆರೋಪಿಸಿದ್ದರು. 

SCROLL FOR NEXT