ದೇಶ

ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ: ಭಾರತ

Sumana Upadhyaya

ನವದೆಹಲಿ:ಪಾಕಿಸ್ತಾನ ಭಯೋತ್ಪಾದನೆಯ ನರ ಕೇಂದ್ರ ಎಂದು ಬಣ್ಣಿಸಿರುವ ಭಾರತ, ಇನ್ನು ಮುಂದಾದರೂ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಂಡು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಅಮೆರಿಕದ ಸವಿಸ್ತಾರ ಬೆಂಬಲ ಮತ್ತು ಅನುಮೋದನೆ ನಿರ್ವಹಣಾ ತಂಡದ 11ನೇ ವರದಿಯನ್ನು ಭಾರತದ ವಿದೇಶಾಂಗ ಇಲಾಖೆ ತಪ್ಪಾಗಿ ನಿರೂಪಿಸಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಈ ಹಿಂದೆ ಭಯೋತ್ಪಾದಕರು ಪಾಕಿಸ್ತಾನವನ್ನು ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಬಳಸಿದ್ದನ್ನು ಅಲ್ಲಿನ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ.

ಕಳೆದ ತಿಂಗಳು ಹೊರಡಿಸಿದ್ದ ವಿಶ್ವಸಂಸ್ಥೆ ವರದಿಯಲ್ಲಿ, ಆಫ್ಘಾನಿಸ್ತಾನ, ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ -ಎ-ತೊಯ್ಬಾ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 6,500 ಭಯೋತ್ಪಾದಕರಲ್ಲಿ ಪಾಕಿಸ್ತಾನದವರೇ ಹಲವರಿದ್ದಾರೆ. ಇದರಿಂದಾಗಿಯೇ ಭಯೋತ್ಪಾದನೆಗೆ ಇಂದು ಶಕ್ತಿ ಸಿಕ್ಕಿರುವುದು ಎಂದು ಹೇಳಿತ್ತು.

ಪಾಕಿಸ್ತಾನದಲ್ಲಿ 30ರಿಂದ 40 ಸಾವಿರ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಲಾಗಿದೆ ಎಂಬ ಮಾತನ್ನು ಅಲ್ಲಿನ ಪ್ರಧಾನಿಯೇ ಕಳೆದ ವರ್ಷ ಒಪ್ಪಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SCROLL FOR NEXT