ದೇಶ

ಸರ್ಕಾರ ಖಲೀಸ್ತಾನ ರಚನೆ ಪ್ರಸ್ತಾಪ ಮುಂದಿಟ್ಟರೆ ಒಪ್ಪಿಕೊಳ್ಳುತ್ತೇವೆ: ಅಕಾಲ್ ತಕ್ತ್ ಜತೇದಾರ್

Srinivasamurthy VN

ಅಮೃತಸರ್: ಕೇಂದ್ರ ಸರ್ಕಾರ ಖಲೀಸ್ತಾನ ರಚನೆ ಪ್ರಸ್ತಾಪ ಇಟ್ಟರೆ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಖಲೀಸ್ತಾನ ಚಳವಳಿ ಮುಖಂಡ ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಹೇಳಿದ್ದಾರೆ.

ಆಪರೇಷನ್ ಬ್ಲೂಸ್ಟಾರ್ ಗೆ 36 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಖಲೀಸ್ತಾನ ರಚನೆ ಪ್ರಸ್ತಾಪ ಇಟ್ಟರೆ ಅದನ್ನು ಸಿಖ್ ಸಮುದಾಯ ಒಪ್ಪಿಕೊಳ್ಳುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಗೋಲ್ಡನ್ ಟೆಂಪಲ್ ನಲ್ಲಿ ಕೆಲವರು ಖಲಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಅವರು, ಇದರಲ್ಲಿ ತಪ್ಪೇನು ಇಲ್ಲ. ಇದು ಸಿಖ್ಖರ ಮನೋಕಾಂಕ್ಷೆಯನ್ನು ಸೂಚಿಸುತ್ತದೆ. ಸರ್ಕಾರ ಖಲೀಸ್ತಾನ ಪ್ರತ್ಯೇಕ ರಾಜ್ಯ ರಚನೆ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು. ಇನ್ನು ನಿನ್ನೆ ಆಪರೇಷನ್ ಬ್ಲೂಸ್ಟಾರ್ ವರ್ಷಾಚರಣೆ ನಿಮಿತ್ತ ಗೋಲ್ಡನ್ ಟೆಂಪಲ್ ನಲ್ಲಿ ನೂರಾರು ಸಿಖ್ ಕಾರ್ಯಕರ್ತರು ಜಮಾಯಿಸಿದ್ದರು. ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸಿಮ್ರಾನ್ ಜೀತ್ ಸಿಂಗ್ ಮನ್ನ್ ಅವರ ಪುತ್ರ ಇಮಾನ್ ಸಿಂಗ್ ನೇತೃತ್ವದಲ್ಲಿ ಇಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಈ ವೇಳೆ ಕೆಲ ಕಾರ್ಯಕರ್ತರು ಪ್ರತ್ಯೇಕ ಖಲೀಸ್ತಾನ ಪರ ಘೋಷಣೆಗಳನ್ನು ಕೂಗಿದ್ದರು. ಇದು ಮಾಧ್ಯಮಗಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

SCROLL FOR NEXT