ದೇಶ

ಭಾರತ-ಚೀನಾ ಮಧ್ಯೆ ನಡೆದ ಮಿಲಿಟರಿ ಮಟ್ಟದ ಮಾತುಕತೆ ಸಕಾರಾತ್ಮಕವಾಗಿತ್ತು:ಉನ್ನತ ಮೂಲಗಳು

Sumana Upadhyaya

ನವದೆಹಲಿ: ಭಾರತ ಮತ್ತು ಚೀನಾ ದೇಶಗಳ ಸೇನಾಪಡೆಗಳಿಂದ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ ಧನಾತ್ಮಕ ಅಂಶ ಕಂಡುಬಂದಿದ್ದು, ಪರ್ವತಭಾಗ ಪೂರ್ವ ಲಡಾಕ್ ನಲ್ಲಿ ಕಳೆದೊಂದು ತಿಂಗಳಿನಿಂದ ಇರುವ ಸೇನಾ ನಿಲುಗಡೆ ಗೊಂದಲಕ್ಕೆ ತೆರೆ ಬೀಳುವ ಲಕ್ಷಣ ಕಂಡುಬರುತ್ತಿದೆ.

ಭಾರತದ ಕಡೆಯ ನಿಯೋಗದಲ್ಲಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್, ಲೇಹ್ ಮೂಲದ 14 ಕಾರ್ಪ್ಸ್ ನ ಜನರಲ್ ಕಮಾಂಡಿಂಗ್ ಆಫೀಸರ್ ಇದ್ದರೆ ಚೀನಾ ಕಡೆಯಿಂದ ಟಿಬೆಟ್ ಮಿಲಿಟರಿ ಜಿಲ್ಲೆಯ ಕಮಾಂಡಿಂಗ್ ಮುಖ್ಯಸ್ಥರು ಭಾಗವಹಿಸಿದ್ದರು. ಎರಡೂ ಕಡೆಯಿಂದ ಪರಿಣಾಮಕಾರಿ ಧನಾತ್ಮಕ ರೀತಿಯಲ್ಲಿ ಮಾತುಕತೆಗಳು ನಡೆದವು ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯ ಚುಶುಲ್ ವಲಯದ ಮಾಲ್ಡೊದಲ್ಲಿ ನಿನ್ನೆ ಬೆಳಗ್ಗೆ 8.30ಕ್ಕೆ ಆರಂಭವಾಗಬೇಕಿದ್ದ ಸಭೆ ಹವಾಮಾನ ವೈಪರೀತ್ಯದಿಂದಾಗಿ ಮೂರು ಗಂಟೆಗಳು ತಡವಾಗಿ ಆರಂಭವಾಯಿತು. ಮಾತುಕತೆ ಆರಂಭಕ್ಕೆ ಮುನ್ನ ಭಾರತೀಯ ಸೇನಾ ನಿಯೋಗವನ್ನು ಚೀನಾ ಸೇನೆಯ ಹಿರಿಯ ಅಧಿಕಾರಿಗಳು ಆದರ ಪೂರ್ವಕವಾಗಿ ಸ್ವಾಗತಿಸಿದರು.

SCROLL FOR NEXT