ದೇಶ

ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲಿರುವ ಐಎನ್ಎಸ್ ಶಾರ್ದೂಲ್ 

Srinivas Rao BV

ನವದೆಹಲಿ: ಶ್ರೀಲಂಕಾ ಹಾಗೂ ಮಾಲ್ಡಿವ್ಸ್ ನಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆತಂದ ಬಳಿಕ ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಐಎನ್ಎಸ್ ಶಾರ್ದೂಲ್ ಮೂಲಕ ವಾಪಸ್ ಕರೆತರಲಾಗುತ್ತಿದೆ. 

ಆಪರೇಷನ್ ಸಮುದ್ರ ಸೇತುವಿನ ಮೊದಲ ಭಾಗವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು ಇರಾನ್ ನ ಬಂದಾರ್ ಅಬ್ಬಾಸ್ ನಿಂದ ಗುಜರಾತ್ ನ ಪೋರ್ ಬಂದರ್ ಗೆ ಭಾರತೀಯರನ್ನು ಕರೆತರಲಾಗುತ್ತಿದೆ. 

ಕೊರೋನಾ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಘೋಷಿಸಿರುವ ವಂದೇ ಭಾರತ್ ಮಿಷನ್ ನ ಮೂರನೇ ಹಂತ ಇದಾಗಿದೆ. 

ಸಮುದ್ರ ಸೇತುವಿನ ಎರಡನೇ ಭಾಗದಲ್ಲಿ ಇರಾನ್ ನಿಂದ ತಮಿಳುನಾಡು ಹಾಗೂ ಕೇರಳದ ಮೀನುಗಾರರನ್ನು ಕರೆತರಲಾಗುತ್ತದೆ. ಇರಾನ್ ನ ದಕ್ಷಿಣ ಪ್ರಾಂತ್ಯದಲ್ಲಿ ಭಾರತದ 1000 ಮೀನುಗಾರರು ಸಿಲುಕಿಕೊಂಡಿದ್ದಾರೆ. 

SCROLL FOR NEXT