ದೇಶ

ಕೊರೋನಾ ವೈರಸ್: ಬಂಗಾಳದಲ್ಲಿ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಿಸಿದ ಸಿಎಂ ಮಮತಾ ಬ್ಯಾನರ್ಜಿ

Srinivasamurthy VN

ಕೋಲ್ಕತಾ: ದಿನೇ ದಿನೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಿಸಿದ್ದಾರೆ.

ಇದೇ ಜೂನ್ 15ಕ್ಕೆ ಲಾಕ್ ಡೌನ್ 5.0 ಮುಕ್ತಾಯವಾಗಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಸಂಪುಟ ಸಭೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಮತ್ತೆ 15 ದಿನಗಳ ಕಾಲ ಅಂದರೆ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ.  

ಲಾಕ್ ಡೌನ್ 5.0 ಸಂದರ್ಭದಲ್ಲಿ ನೀಡಲಾಗಿದ್ದ ವಿನಾಯಿತಿಗಳೇ ಮುಂದಿನ ಹಂತದ ಲಾಕ್ ಡೌನ್ ಗೂ ಮುಂದುವರೆಯಲಿದ್ದು, ಸಾಮಾಜಿಕ ಕಾರ್ಯಕ್ರಮಗಳಿಗೆ 10 ಮಂದಿಯ ಮಿತಿ ಹೇರಲಾಗಿದೆ. ಅಂತೆಯೇ ಮದುವೆ ಮತ್ತು ಸಾವಿನಂತಹ ಕಾರ್ಯಕ್ರಮಗಳಿಗೆ 25 ಮಂದಿಯ ಮಿತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. 

ಜೂನ್ 1ರಿಂದ ಬಂಗಾಳದಲ್ಲಿ ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ಚರ್ಚ್ ಗಳಲ್ಲಿ ಷರತ್ತು ಬದ್ದ ಪ್ರಾರ್ಥನೆಗೆ ಅವಕಾಶ ನೀಡಿದ್ದರು. ಜೂಟ್, ಟೀ ಎಸ್ಟೇಟ್ ಮತ್ತು ಕಟ್ಟಡ ಕಾಮಗಾರಿಗಳಲ್ಲಿ ಪೂರ್ಣ ಪ್ರಮಾಣದ ಕಾರ್ಮಿಕರ ಬಳಕೆಗೂ ಅನುಮತಿ ನೀಡಿದ್ದರು. ಈ ಎಲ್ಲ ವಿನಾಯಿತಿಗಳು  ಲಾಕ್ ಡೌನ್ ನಲ್ಲಿ ಮುಂದುವರೆಯಲಿದೆ. ಅಲ್ಲದೆ ಮಾಲ್ ಗಳು ಮತ್ತು ರೆಸ್ಟೋರೆಂಟ್ ಗಳು ಇಂದಿನಿಂದ ಓಪನ್ ಆಗಿವೆ. 

SCROLL FOR NEXT