ದೇಶ

ಭಾರತದಲ್ಲಿ ಕೊವಿಡ್-19 ಸಾವಿನ ಪ್ರಮಾಣ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು: ಅಧ್ಯಯನ

Lingaraj Badiger

ನವದೆಹಲಿ: ಇತರೆ ದೇಶಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಕೊವಿಡ್ -19 ಸಾವಿನ ಪ್ರಮಾಣವೂ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂಬುದು ಅಧ್ಯಯನವೊಂದರಿಂದ ಬಹಿರಂಗವಾಗಿದೆ.

ದೇಶದಲ್ಲಿ ಒಟ್ಟಾರೆ ಕೊವಿಡ್-19 ಸೋಂಕಿತರ ಪೈಕಿ ಪುರುಷರ ಸಂಖ್ಯೆ ಹೆಚ್ಚಿದ್ದರೆ, ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಇದು ಜಾಗತಿಕ ಪ್ರವೃತ್ತಿಗೆ ವಿರುದ್ಧವಾಗಿದೆ ಎಂದು ಅಧ್ಯಯನ ತಿಳಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ನಿಂದ ಶೇಕಡಾ 3.3 ರಷ್ಟು ಮಹಿಳೆಯರು ಹಾಗೂ ಶೇ. 2.9 ರಷ್ಟು ಪುರುಷರು ಮೃತಪಟ್ಟಿದ್ದಾರೆ ಎಂಬುದು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್, ಜೈಪುರದ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ ಮತ್ತು ಯುಎಸ್‌ನ ಹಾರ್ವರ್ಡ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯಿಂದ ಸ್ಪಷ್ಟವಾಗಿದೆ.

ಸೋಂಕಿತರ ಪೈಕಿ 40-49 ವರ್ಷ ವರ್ಷದ ಶೇ.3.2 ಮಹಿಳೆಯರು ಮೃತಪಟ್ಟರೆ, ಶೇ. 2.1 ರಷ್ಟು ಪುರುಷರು ಕೊರೋನಾ ಬಲಿಯಾಗಿದ್ದಾರೆ. ಅಲ್ಲದೆ ಈ ಸಾಂಕ್ರಾಮಿಕ ಕಾಯಿಲೆಗೆ 5-19 ವರ್ಷ ವರ್ಷದ ಮಹಿಳೆಯರು ಮಾತ್ರ ಬಲಿಯಾಗಿದ್ದಾರೆ ಎಂದು ಅಧ್ಯಯನ ವಿವರಿಸಿದೆ.

SCROLL FOR NEXT