ದೇಶ

ಡಿ ವೈಎಫ್ ಐ ಅಧ್ಯಕ್ಷ ರಿಯಾಜ್ ಜೊತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವಿವಾಹ

Shilpa D

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್‌ ಅವರ ವಿವಾಹ ಡೆಮಾಕ್ರೆಟಿಕ್‌ ಯೂತ್‌ ಫೆಡರೇ­ಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್‌ ರಿಯಾಸ್‌ ಅವರೊಂದಿಗೆ ನೆರವೇರಲಿದೆ.

ಜೂ. 15ರಂದು ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ನೆರವೇರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಐಟಿ ಕಂಪನಿಯ ನಿರ್ದೇಶಕರಾಗಿರುವ ವೀಣಾ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಿಯಾಸ್‌ ಅವರು 2009ರ ಲೋಕಸಭೆ ಚುನಾವಣೆಯಲ್ಲಿ  ಸಿಪಿಐ­(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

SCROLL FOR NEXT