ದೇಶ

ಚತ್ತೀಸ್ ಗಢ: ನೀರಿಗೆ ಬಿದ್ದಿದ್ದ 81 ವರ್ಷದ ವೃದ್ಧೆ 4 ಗಂಟೆಗಳ ಬಳಿಕವೂ ಮುಳುಗದೇ ಜೀವಂತ, ರಕ್ಷಣೆ

Srinivas Rao BV

ರಾಯ್ ಪುರ: ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದ 81 ವರ್ಷದ ವೃದ್ಧೆ 4 ಗಂಟೆಗಳ ಬಳಿಕವೂ ಜೀವಂತವಾಗಿದ್ದು, ಆಕೆಯನ್ನು ರಕ್ಷಿಸಲಾಗಿದೆ. 

ಪ್ರಜ್ಞಾಹೀನ ಸ್ಥಿತಿಯಲ್ಲಿ ನೀರಿನಲ್ಲಿ ತೇಲುತ್ತಿದ್ದ ಆಕೆಯನ್ನು ಗಮನಿಸಿದ ವ್ಯಕ್ತಿಯೊಬ್ಬರು, ದುರ್ಗ್ ಜಿಲ್ಲೆಯ ತುರ್ತು ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಸುಹಾಗ ರಗ (81) ಎಂಬ ವೃದ್ಧ ಮಹಿಳೆ ತನ್ನ ಎಂದಿನ ಕೆಲಸಕ್ಕಾಗಿ ಶಿವ್ನಾಥ್ ನದಿಯ ದಡದಲ್ಲಿ ಹೋಗುತ್ತಿದ್ದರು. ಬುಧವಾರ ಆಕೆಯ ಮಗನಿಗಾಗಿ ನದಿಯ ದಡದಲ್ಲಿ ನಿಂತು ಕಾಯುತ್ತಿರಬೇಕಾದರೆ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದಿದ್ದಾರೆ. ಆದರೆ ಪವಾಡಸದೃಶ ರೀತಿಯಲ್ಲಿ 4 ಗಂಟೆಗಳ ನಂತರವೂ ಆಕೆ ನೀರಿನಲ್ಲಿ ಮುಳುಗದೇ ಜೀವಂತವಿದ್ದು, ಸುರಕ್ಷಿತವಾಗಿ ಹೊರಬಂದಿದ್ದಾರೆ.

ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ. ನಾನು ಸಮತೋಲನ ಕಳೆದುಕೊಂಡು ನೀರಿಗೆ ಬಿದ್ದೆ. ನೀರಿನಿಂದ ಹೊರಬರಲು ತೀವ್ರವಾಗಿ ಪ್ರಯತ್ನಿಸಿದೆ, ನನಗೆ ನೆನಪಿರುವುದಷ್ಟೇ ಎನ್ನುತ್ತಾರೆ ಸುಹಾಗ  

ತಜ್ಞರು ಈ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದು, "ಇದು ಬಹುಶಃ ಅರ್ಧ ಮುಳುಗುವಿಕೆಯ ಸ್ಥಿತಿ ಇರಬೇಕು, ಹೀಗಾದಾಗ ಶ್ವಾಸನಾಳದಲ್ಲಿ ಗಾಳಿಯ ಬದಲು ನೀರು ಹೋಗದೇ ಇರುವಂತಾಗುತ್ತದೆ. ಮತ್ತೊಂದು ಸಾಧ್ಯತೆ ಎಂದರೆ ಕಡಿಮೆ ನೀರಿನ ಮಟ್ಟ ಹಾಗೂ ನದಿಯ ಹರಿವು ನಿಧಾನಗತಿಯಲ್ಲಿದ್ದರಿಂದ ಆಕೆ ಜೀವಂತವಾಗಿರಲು ಸಾಧ್ಯವಾಗಿರಬಹುದು ಎಂದು ಇ.ಎನ್.ಟಿ ತಜ್ಞರು ವಿಶ್ಲೇಷಿಸಿದ್ದಾರೆ.

SCROLL FOR NEXT