ಸಂಗ್ರಹ ಚಿತ್ರ 
ದೇಶ

ಕೋಟ್ಯಾಂತರ ಭಾರತೀಯರ ಕನಸು ಅಯೋಧ್ಯೆ ರಾಮಮಂದಿರಕ್ಕಿಂದು ಅಡಿಪಾಯ: ಕುಬೇರ ತಿಲಾದಲ್ಲಿ ರುದ್ರಾಭಿಷೇಕಕ್ಕೆ ಸಕಲ ಸಿದ್ಧತೆ

ಮರ್ಯಾದಾ ಪುರುಷೋತ್ತಮ, ಏಕಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದ್ದು, ಇದಕ್ಕೂ ಮುನ್ನ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ.

ಅಯೋಧ್ಯೆ: ಮರ್ಯಾದಾ ಪುರುಷೋತ್ತಮ, ಏಕಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದ್ದು, ಇದಕ್ಕೂ ಮುನ್ನ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ.

ಲಂಕೆಯ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಶಿವನಿಗೆ ಶ್ರೀರಾಮಚಂದ್ರ ರುದ್ರಾಭಿಷೇಕ ಮಾಡಿದ್ದ. ಅದರಂತೆ ರಾಮ ಜನ್ಮಭೂಮಿಯಲ್ಲಿರುವ ಕುಬೇರ ತಿಲಾದಲ್ಲಿ ರುದ್ರಾಭಿಷೇಕ ನಡೆಯಲಿದೆ. ರುದ್ರಾಭಿಷೇಕ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾಂತ್ ಕಮಲ್ ನಯನ್ ದಾಸ್ ಜಿ ಮಹಾರಾಜ್ ಅವರು, ಕುಬೇರ್ ತಿಲಾದಲ್ಲಿ ರುದ್ರಾಭಿಷೇಖ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿರಲಿದ್ದಾರೆಂದು ಹೇಳಿದ್ದಾರೆ. 

ಪ್ರತೀನಿತ್ಯ ದೇಗುಲದಲ್ಲಿ ನಡೆಯುವ ಪ್ರಾರ್ಥಿಗಳು ಮುಂದುವರೆಯಲಿವೆ. ಕೊರೋನಾ ಸಾಂಕ್ರಾಮಿಕ ರೋಗವನ್ನು ದೂರಾಗಿಸುವ ಸಲುವಾಗಿ ಶಿವನನ್ನು ಪ್ರಾರ್ಥಿಸಲಾಗುತ್ತದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವೇಳೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಈ ರುದ್ರಾಭಿಷೇಕ ದೂರಾಗಿಸುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಶಂಕುಸ್ಥಾಪನೆ ಮಾಡಲು ಆಗಮಿಸುತ್ತಿಲ್ಲ. ಇಲ್ಲದಿದ್ದರೆ, ಖಂಡಿತವಾಗಿಯೂ ಅವರೇ ಶಂಕುಸ್ಥಾಪನೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. 

ಎರಡು ಅಂತಸ್ತಿನ ದೇಗುಲವನ್ನು ನಿರ್ಮಿಯುವ ಯೋಜನೆ ಇದಾಗಿದೆ. 2020ಕ್ಕೆ ಉತ್ತಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಅವಧಿ ಮುಗಿಯಲಿದ್ದು, ಅಷ್ಟರೊಳಗೆ ಮೊದಲ ಅಂತಸ್ತನ್ನಾದರೂ ಪೂರ್ಣಗೊಳಿಸಬೇಕು ಎಂದು ಸಾಧು ಸಂತರು ಬೇಡಿಕೆ ಇಟ್ಟಿದ್ದಾರೆ. 

67.7 ಎಕರೆ ಜಾಗದ ಮಧ್ಯೆ ರಾಮಮಂದಿರ ನಿರ್ಮಾಣವಾಗಲಿದೆ. 1 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ದೇಗುಲ ನಿರ್ಮಿಸುವ ಯೋಜನೆ ಇದೆ. 268 ಅಡಿ ಉದ್ದ, 140 ಅಗಿ ಅಗಲ, 128 ಅಡಿ ಎತ್ತರದ ದೇಗುಲ 2 ಅಂತಸ್ತಿನ ದೇಗುಲ ಇದಾಗಿರಲಿದೆ. ಮೊದಲ ಮಹಡಿಯಲ್ಲಿ 106, ಹಾಗೂ 2ನೇ ಮಹಡಿಯಲ್ಲಿ 106 ಕಂಬಗಳು ಇರಲಿವೆ. ರಾಮಮಂದಿರಕ್ಕೆ ತೆರಳಲು 2 ಎಕರೆ ಜಾಗದಲ್ಲಿ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಉಳಿದ ಜಾಗದಲ್ಲಿ ಭಜನಾ ಕೇಂದ್ರ, ರಂಗಮಂಟಪ, ಭಕ್ತಾದಿಗಳು ತಂಗುವುದಕ್ಕೆ ಧರ್ಮ ಶಾಲೆ, ಭೋಜನ ಕೋಣೆ ಮತ್ತಿತರ ಸೌಕರ್ಯಗಳು ಇರಲಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT