ದೇಶ

ದೆಹಲಿಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆ 500 ರೈಲ್ವೇ ಕೋಚ್ ಪೂರೈಕೆ; ಅಮಿತ್ ಶಾ

Nagaraja AB

ನವದೆಹಲಿ: ಕೋವಿಡ್ -19 ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತಕ್ಷಣ ದೆಹಲಿಗೆ 500 ರೈಲ್ವೆ ಬೋಗಿಗಳನ್ನು ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ,  ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಿತರರೊಂದಿಗೆ ಇಂದು ಸಭೆ ನಡೆಸಿ ಕೋವಿಡ್-19 ಸ್ಥಿತಿಗತಿಯ ಕುರಿತು ಸಭೆ ನಡೆಸಿದ ಅಮಿತ್ ಶಾ, ಈ ರೈಲ್ವೇ ಬೋಗಿಗಳಿಗೆ ಹೆಚ್ಚುವಾರಿಯಾಗಿ ಕೋವಿಡ್-19 ರೋಗಿಗಳಿಗಾಗಿ 8 ಸಾವಿರ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗುವುದು, ಸೋಂಕು ವಿರುದ್ದ ಹೋರಾಡುವ ನಿಟ್ಟಿನಲ್ಲಿ ಎಲ್ಲಾ ಉಪಕರಣಗಳನ್ನು ಒದಗಿಸಲಾಗುವುದು ಎಂದರು.

ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾವೈರಸ್ ಸೋಂಕು ಹರಡುವಿಕೆ ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಎರಡು ಪಟ್ಟು ಹಾಗೂ  ಆರು ದಿನಗೊಳಗೆ ಮೂರು ಪಟ್ಟು ಕೋವಿಡ್-19 ಪರೀಕ್ಷೆಯನ್ನು  ಹೆಚ್ಚಿಸಲಾಗುವುದು, ಕೆಲ ದಿನಗಳಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿನ ಪ್ರತಿ ಮತಗಟ್ಟೆಯಲ್ಲಿ ಪರೀಕ್ಷಾ ಸೌಕರ್ಯವನ್ನು ಹೆಚ್ಚಿಸಲಾಗುವುದು,  ಎಂದು ಅಮಿತ್ ಶಾ ಹೇಳಿದ್ದಾರೆ.

ಕೊರೋನಾವೈರಸ್ ಸೋಂಕಿನಿಂದ ನವದೆಹಲಿಯಲ್ಲಿ 1200 ರೋಗಿಗಳು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 39 ಸಾವಿರಕ್ಕೆ ಏರಿಕೆ ಆಗಿದೆ.

SCROLL FOR NEXT