ದೇಶ

ಜೂನ್ 17 ರಿಂದ ಕರ್ನಾಟಕಕ್ಕೆ ಎಪಿಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

Nagaraja AB

ವಿಜಯವಾಡ: ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಜೂನ್ 17 ರಿಂದ ಕರ್ನಾಟಕಕ್ಕೆ ಬಸ್‍ ಸೇವೆಗಳನ್ನು ಪುನರಾರಂಭಿಸಲಿದೆ.

ನಿಗಮದ ಮೂಲಗಳಂತೆ, 500 ಬಸ್‌ಗಳು ನಾಲ್ಕು ಹಂತಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಟಿಕೆಟ್‌ಗಳ ಆನ್‌ಲೈನ್ ಕಾಯ್ದಿರಿಸುವಿಕೆ ಇಂದಿನಿಂದಲೇ ಆರಂಭವಾಗಿದೆ. 

ಕರ್ನಾಟಕದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಲ್ಲಿ ಪ್ರತಿ ಬಸ್‌ನಿಂದ ಶೇ 5 ರಷ್ಟು ಪ್ರಯಾಣಿಕರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು.ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳಂತೆ ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಎಪಿಎಸ್‌ಆರ್‌ಟಿಸಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ಲಾಕ್‍ಡೌನ್‍ ಘೋಷಣೆಯಾದ ನಂತರ ನಿಗಮದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಸುರಕ್ಷತಾ ಕ್ರಮಗಳೊಂದಿಗೆ ಬಸ್‍ ಸೇವೆ ಪುನರಾರಂಭಿಸಲಾಗುತ್ತಿದೆ.

SCROLL FOR NEXT