ದೇಶ

ದೆಹಲಿಯಲ್ಲಿ ಕೊವಿಡ್‍-19 ಪರೀಕ್ಷೆ ದರ 2,400 ರೂ. ಗೆ ಇಳಿಕೆ

Lingaraj Badiger

ನವದೆಹಲಿ: ದೆಹಲಿಯಲ್ಲಿ ಕೊವಿಡ್‍ -19 ಪರೀಕ್ಷೆ ದರವನ್ನು 4,500 ರೂ.ಗಳಿಂದ 2,400 ರೂ.ಗೆ ಇಳಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

ಹೊಸ ದರಗಳು ಗುರುವಾರದಿಂದ ಅನ್ವಯವಾಗಲಿದ್ದು, ‘ಸಾಮಾನ್ಯ ಜನರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊವಿಡ್-19 ಪರೀಕ್ಷಾ ದರವನ್ನು 2,400 ರೂ. ನಿಗದಿಪಡಿಸಲು ನಿರ್ಧರಿಸಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಜೂನ್ 18ರಿಂದ ಐಸಿಎಂಆರ್ ಅನುಮೋದಿಸಿದ ಹೊಸ ರಾಪಿಡ್ ಆಂಟಿಜೆನ್ ವಿಧಾನದ ಮೂಲಕ ಕೊವಿಡ್-19 ಪರೀಕ್ಷೆಗಳನ್ನು ನಡೆಸಲಾಗುವುದು. ಈ ಕಿಟ್ ಗಳಿಗೆ ದೆಹಲಿ ಸರ್ಕಾರ ಆದ್ಯತೆ ನೀಡಲಿದೆ. ದೆಹಲಿಯಾದ್ಯಂತ 169 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಲ್ಲದೆ, ದೆಹಲಿಯ ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪರ್ಕ ಮ್ಯಾಪಿಂಗ್ ಸುಧಾರಿಸಲು ಆರೋಗ್ಯ ಸಮೀಕ್ಷೆಗಳನ್ನು ಆರಂಭಿಸಲಾಗಿದೆ. 242 ಕಂಟೈನ್ ಮೆಂಟ್ ವಲಯಗಳಲ್ಲಿ ಒಟ್ಟು 2,30,466 ಜನರ ಪೈಕಿ 1, 77,692 ಜನರ ಸಮೀಕ್ಷೆಯನ್ನು ಜೂನ್ 15-16 ರ ನಡುವೆ ನಡೆಸಲಾಗಿದ್ದು, ಉಳಿದವರಿಗೆ ಜೂನ್ 20ರೊಳಗೆ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT