ದೇಶ

ಸುಳ್ಳು ಸುದ್ದಿಗಳನ್ನು ಸಹಿಸಲಾಗುವುದಿಲ್ಲ, ಸೂಕ್ತ ಮಾಹಿತಿ ಪಡೆಯುವುದು ಜನರ ಹಕ್ಕು- ಜಾವಡೇಕರ್

Lingaraj Badiger

ಭೋಪಾಲ್: ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಸೂಕ್ತ ಮಾಹಿತಿ ಪಡೆಯುವುದು ಜನರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಜಾವಡೇಕರ್ ಅವರು ಭೋಪಾಲ್ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರವೃತ್ತಿಯ ಬಗ್ಗೆ ಮಾತನಾಡಿದರು.

ಸುಳ್ಳು ಸುದ್ದಿಗಳನ್ನು ಕಂಡುಹಿಡಿಯಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ನೊಂದಿಗೆ ವಾಸ್ತವ ಅರಿಯುವ ಘಟಕವನ್ನು ರಚಿಸಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ರಾಜ್ಯಗಳಲ್ಲಿ ಇಂತಹ ವಾಸ್ತವ ಪರಿಶೀಲನೆ ಘಟಕಗಳನ್ನು ರಚಿಸಲಾಗುತ್ತಿದೆ. ಇದರಿಂದ ಜನರಿಗೆ ಸರಿಯಾದ ಮಾಹಿತಿ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ಚೀನಾ ನಡುವಿನ ವಿವಾದ ಮತ್ತು ಕೋವಿಡ್ -19 ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ಕೇಂದ್ರ ಸಚಿವ ಜಾವಡೇಕರ್ ಚರ್ಚಿಸಿದರು.

SCROLL FOR NEXT