ದೇಶ

ಗೋಮಾತೆ, ಗಂಗಾನದಿ, ಭಗವದ್ಗೀತೆಯಿಂದ ಭಾರತ ವಿಶ್ವ ಗುರುವಾಗಿದೆ:ಉ.ಪ್ರ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿ

Sumana Upadhyaya

ಲಕ್ನೋ:ಗೋವು, ಗಂಗಾ ನದಿ ಮತ್ತು ಭಗವದ್ಗೀತೆ ಭಾರತದ ಹೆಗ್ಗುರುತಾಗಿದ್ದು, ಈ ಮೂರು ವಿಷಯಗಳಿಂದಾಗಿ ಭಾರತ ವಿಶ್ವದ ನಾಯಕನಾಗಿ ಗುರುತಿಸಿದೆ ಎಂದು ಉತ್ತರ ಪ್ರದೇಶದ ಪಶುಸಂಗೋಪನಾ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ಹೇಳಿದ್ದಾರೆ.

ಗೋ ಹತ್ಯೆ ನಿಷೇಧಕ್ಕೆ ಹಿಂದಿನ ಸರ್ಕಾರ ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂದು ಆರೋಪಿಸಿದ ಅವರು, ಹಸು, ಗಂಗಾ ಮತ್ತು ಭಗವದ್ಗೀತೆ ಭಾರತದ ಗುರುತಾಗಿದ್ದು, ಇದರಿಂದಾಗಿ ಭಾರತ ಇಂದು ವಿಶ್ವ ಗುರು ಎನಿಸಿಕೊಂಡಿದೆ. ನಮ್ಮ ದೇಶದಲ್ಲಿ ಎಮ್ಮೆಗಳು ಇಲ್ಲದಿದ್ದಾಗ ಹಸುಗಳು ಮಾತ್ರ ಇದ್ದವು. ತಾಯಿ ಹಾಲಿನ ನಂತರ ಭಾರತದ ಹಸುವಿನ ಹಾಲು ನವಜಾತ ಶಿಶುವಿಗೆ ಸಹ ಕುಡಿಸಲು ಶ್ರೇಷ್ಠ ಎಂದು ವೈದ್ಯರುಗಳು ಸಹ ಹೇಳುತ್ತಾರೆ ಎಂದರು.

ಹಸುಗಳನ್ನು ಕೊಲ್ಲುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರ ಗೋ ಹತ್ಯೆ ನಿಷೇಧ(ತಿದ್ದುಪಡಿ)ವಿಧೇಯಕ 2020ನ್ನು ಜಾರಿಗೆ ತಂದಿದ್ದು ಹಿಂದಿನ ಸರ್ಕಾರಗಳಲ್ಲಿ ಗೋಹತ್ಯೆಯ ಹಲವು ಕೇಸುಗಳು ಬಂದಿದ್ದವು. ಆದರೆ ಅದನ್ನು ನಿಷೇಧಿಸಲು ಸರ್ಕಾರಗಳು ಪ್ರಯತ್ನ ಮಾಡಿರಲಿಲ್ಲ. ಹಿಂದೆಲ್ಲಾ ಗೋಹತ್ಯೆ ಮಾಡಿ ಸಿಕ್ಕಿಬಿದ್ದವರಿಗೆ ಜಾಮೀನುಸಹಿತ ಬಂಧನ ವಿಧಿಸಿ ಕೆಲ ದಿನಗಳವರೆಗೆ ಮಾತ್ರ ಶಿಕ್ಷೆ ನೀಡಲಾಗುತ್ತಿತ್ತು. ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿತ್ತು. ಆದರೆ ಇನ್ನು ಮುಂದೆ ಕಷ್ಟವಿದೆ ಎಂದರು.

ಸರ್ಕಾರ ತಂದಿರುವ ಈ ತಿದ್ದುಪಡಿ ವಿಧೇಯಕ ಯಾವುದೇ ಒಂದು ನಿರ್ದಿಷ್ಟ ವರ್ಗ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.

SCROLL FOR NEXT