ಪ್ರಧಾನಿ ನರೇಂದ್ರ ಮೋದಿ 
ದೇಶ

ಭಾರತದ ಒಳಗೆ ನುಗ್ಗಲು ಚೀನಾ ಸೈನಿಕರಿಗೆ ಧೈರ್ಯ ಬರಲಿಲ್ಲ ಎಂಬುದು ಮೋದಿ ಮಾತಿನ ಅರ್ಥ: ವಿಪಕ್ಷಗಳಿಗೆ ಪಿಎಂಒ ಸ್ಪಷ್ಟನೆ

ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ ಸೇನಾಪಡೆ ಗಡಿಭಾಗ ದಾಟಿ ಭಾರತದ ಪ್ರಾಂತ್ಯದೊಳಗೆ ಪ್ರವೇಶಿಸಿಲ್ಲ ಮತ್ತು ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ವಿಪಕ್ಷ ನಾಯಕರು ಮಾಡುತ್ತಿರುವ ಟೀಕೆ ಕುಚೇಷ್ಠೆಯ ವ್ಯಾಖ್ಯಾನವಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಶನಿವಾರ ಆರೋಪಿಸಿದೆ.

ನವದೆಹಲಿ:ಕಳೆದ ಸೋಮವಾರ ನಡೆದ ಘರ್ಷಣೆಯಲ್ಲಿ ಚೀನಾ ಸೇನಾಪಡೆ ಗಡಿಭಾಗ ದಾಟಿ ಭಾರತದ ಪ್ರಾಂತ್ಯದೊಳಗೆ ಪ್ರವೇಶಿಸಿಲ್ಲ ಮತ್ತು ಮಿಲಿಟರಿ ಕೇಂದ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ವಿಪಕ್ಷ ನಾಯಕರು ಮಾಡುತ್ತಿರುವ ಟೀಕೆ ಕುಚೇಷ್ಠೆಯ ವ್ಯಾಖ್ಯಾನವಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಶನಿವಾರ ಆರೋಪಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಗಡಿ ವಾಸ್ತವ ರೇಖೆಯ ನಮ್ಮ ಭಾಗಕ್ಕೆ ಚೀನಾ ಸೇನಾಪಡೆ ನುಗ್ಗಿಬರಲು ಸಾಧ್ಯವಾಗಿಲ್ಲ, ನಮ್ಮ ಸೈನಿಕರು ತೋರಿದ ದಿಟ್ಟತನದಿಂದ ಚೀನಾ ಸೈನಿಕರಿಗೆ ಭಾರತದ ಪ್ರಾಂತ್ಯದೊಳಗೆ ನುಗ್ಗಿ ಬರಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಗಡಿ ವಾಸ್ತವ ರೇಖೆಯನ್ನು ಉಲ್ಲಂಘಿಸುವ ಪ್ರಯತ್ನಗಳಿಗೆ ನಮ್ಮ ಸೇನೆ ದಿಟ್ಟತನದಿಂದ ದೃಢವಾಗಿ ಪ್ರತಿಕ್ರಿಯೆ ನೀಡಿದೆ ಎಂಬರ್ಥದಲ್ಲಿ ಪ್ರಧಾನಿ ಹೇಳಿರುವ ಮಾತುಗಳನ್ನು ವಿಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡು ಕುಚೋದ್ಯದ ಟೀಕೆಗಳನ್ನು ಮಾಡುತ್ತಿವೆ ಎಂದು ಆರೋಪಿಸಿದೆ.

16 ಬಿಹಾರ ರೆಜಿಮೆಂಟ್ ಸೈನಿಕರ ತ್ಯಾಗ, ಬಲಿದಾನಗಳಿಂದ ಚೀನಾ ಸೈನಿಕರು ಒಳಗೆ ನುಗ್ಗಿ ನಮ್ಮ ಪ್ರಾಂತ್ಯದೊಳಗೆ ಬರುವ ಪ್ರಯತ್ನ ವಿಫಲವಾಯಿತು. ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಯಾವುದೇ ಏಕಪಕ್ಷೀಯ ಬದಲಾವಣೆಗೆ ನಮ್ಮ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT