ದೇಶ

ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧಾರ: ಮುಕ್ತಾರ್‌ ಅಬ್ಬಾಸ್‌ ನಖ್ವಿ

Nagaraja AB

ನವದೆಹಲಿ: ಕೋವಿಡ್-19 ಪರಿಣಾಮದಿಂದಾಗಿ  ಈ ವರ್ಷ ಭಾರತದಿಂದ ಹಜ್ ಯಾತ್ರಿಕರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

2.3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಅರ್ಜಿ ಹಣವನ್ನು ಯಾವುದೇ ಕಡಿತವಿಲ್ಲದೆ ನೇರ ವರ್ಗಾವಣೆ ಮೂಲಕ ಹಿಂತಿರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಸೌದಿ ಅರೇಬಿಯಾ ಹಜ್ ಮತ್ತು ಉಮ್ರಾ ಮಂತ್ರಿ ಮೊಹಮ್ಮದ್ ಸಲೇಹ್ ಬಿನ್ ತಾಹರ್ ಬೆಂಟನ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಭಾರತದಿಂದ ಯಾತ್ರಿಕರನ್ನು ಕಳುಹಿಸದಂತೆ ಸಲಹೆ ಮಾಡಿದ್ದಾರೆ. ಸೌದಿ ನಿರ್ಧಾರವನ್ನು ಗೌರವಿಸುತ್ತೇವೆ.ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮುಸ್ಲಿಂರು ಹಜ್ ಯಾತ್ರೆಗೆ ಬಾರದಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ಪುರುಷರ ನೆರವಿಲ್ಲದಂತೆ ಹಜ್ ಯಾತ್ರೆ ಕೈಗೊಳ್ಳಲು 2 ಸಾವಿರದ 143 ಮಂದಿ ಅರ್ಜಿ ಸಲ್ಲಿಸಿದ್ದರು. ಅಂತವರು ಹಜ್ ನಲ್ಲಿ ಪೂಜೆ ಸಲ್ಲಿಸಲು ಬಯಸಿದ್ದರೆ ಮುಂದಿನ ವರ್ಷ ಕಳುಹಿಸಲು ಅವಕಾಶ ನೀಡಲಾಗುವುದು ಎಂದು ನಖ್ವಿ ಹೇಳಿದ್ದಾರೆ. 

SCROLL FOR NEXT