ದೇಶ

30 ವರ್ಷದ ಮಹಿಳೆಗೆ ಹೊಟ್ಟೆನೋವು, ವೈದ್ಯಕೀಯ ಪರೀಕ್ಷೆ ಬಳಿಕ ತಿಳಿದದ್ದು... ಅವಳು ಹುಟ್ಟಿನಿಂದಲೇ 'ಅವಳಲ್ಲ.. ಅವನು'!

Srinivasamurthy VN

ಕೋಲ್ಕತಾ: 30 ವರ್ಷದ ಬಳಿಕ ಮಹಿಳೆಯೊಬ್ಬಳು ತಾನು 'ಅವಳಲ್ಲ... ಅವನು' ಎಂಬ ಸತ್ಯ ತಿಳಿದ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ಹೌದು.. ಪಶ್ಚಿಮ ಬಂಗಾಳದ ಭೀರ್ ಭೂಮಿ ಮೂಲದ ಮಹಿಳೆ ಸತತ 30 ವರ್ಷಗಳ ಹೆಣ್ಣಾಗಿ ಜೀವನ ಕಳೆದಿದ್ದ ಮಹಿಳೆಯೊಬ್ಬಳು ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವೇಳೆ ಆಕೆಯ ದೇಹವನ್ನು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರಿಗೆ ಆಘಾತಕಾರಿ ಅಂಶ ತಿಳಿದುಬಂದಿದೆ. ಹುಟ್ಟಿನಿಂದಲೇ ಹೆಣ್ಣಾಗಿ ಜನಿಸಿದ್ದ ಆಕೆ ಹೆಣ್ಣಲ್ಲ ಗಂಡು ಎಂದು ತಿಳಿದು ಅಚ್ಚರಿಗೊಂಡಿದ್ದಾರೆ.

ಹುಟ್ಟಿನಿಂದಲೇ ಹೆಣ್ಣಾಗಿ ಹುಟ್ಟಿದ್ದ ಆಕೆಯ ದೇಹ ಪ್ರಕೃತಿ ದತ್ತವಾಗಿ ಬೆಳೆದಿತ್ತು. ಕೂದಲು, ಮರ್ಮಾಂಗ, ಸ್ಥನಗಳು ಎಲ್ಲವೂ ಹೆಣ್ಣಿಗೆ ಬೆಳೆಯುವಂತೆಯೇ ಬೆಳೆದಿದ್ದವು. ಆದರೆ ಹೆಣ್ಣಿಗೆ ಇರಬೇಕಾದ ಗರ್ಭಾಶಯ ಮತ್ತು ಅಂಡಾಶಯಗಳು (uterus and ovaries)ಗಳೇ ಇರಲಿಲ್ಲ. ವೃಷಣದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಕೆಯಲ್ಲಿ ಹುಟ್ಟಿನಿಂದಲೇ ಗರ್ಭಾಶಯ ಮತ್ತು ಅಂಡಾಶಯಗಳೇ ಇರಲಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಈ ಸಮಸ್ಯೆಯನ್ನು 'ಆಂಡ್ರೊಜೆನ್ ಸೆನ್ಸಿಟಿವಿಟಿ ಸಿಂಡ್ರೋಮ್' (Androgen Insensitivity Syndrome) ಎಂದು ಕರೆಯುತ್ತಾರೆ. 

ಜನ್ಮತಹ ಪುರುಷನಾಗಿ ಹುಟ್ಟುವ ವ್ಯಕ್ತಿಯಲ್ಲಿ ಮಹಿಳೆಗೆ ಇರುವ ಲಕ್ಷಣಗಳು ಗೋಚರಿಸುವುದೇ ಈ ಸಮಸ್ಯೆಯ ಲಕ್ಷಣಗಳು. ಇದೇ ಸಮಸ್ಯೆ ಇದೀಗ ಈ ಮಹಿಳೆಯಲ್ಲೂ ಕಾಣಿಸಿಕೊಂಡಿದೆ. ಕಳೆದ 9 ವರ್ಷಗಳ ಹಿಂದೆ ಈ ಮಹಿಳೆಗೆ ಮದುವೆಯಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಈಕೆಯ ಕೆಳ ಹೊಟ್ಟೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ. ಅನುಪಮ್ ದತ್ತಾ ಮತ್ತು ಶಸ್ತ್ರಚಿಕಿತ್ಸಕ ಆಂಕೊಲಾಜಿಸ್ಟ್ ಡಾ. ಸೌಮೆನ್ ದಾಸ್ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಆಕೆಯಲ್ಲಿ ಈ 'ಆಂಡ್ರೊಜೆನ್ ಸೆನ್ಸಿಟಿವಿಟಿ ಸಿಂಡ್ರೋಮ್' (Androgen Insensitivity Syndrome) ಸಮಸ್ಯೆ ಇರುವುದು ತಿಳಿದುಬಂದಿದೆ.

ಡಾ.ದತ್ತಾ ಅವರು ನೀಡಿರುವ ಮಾಹಿತಿಯಂತೆ ಮಹಿಳೆಗೆ ಈ ವರೆಗೂ ಋತುಸ್ರಾವವೇ ಆಗಿಲ್ಲ. ಇದು ತೀರ ಅಪರೂಪದ ಸಮಸ್ಯೆಯಾಗಿದ್ದು, ಪ್ರತೀ 22 ಸಾವಿರ ವ್ಯಕ್ತಿಗಳಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಕಂಡುಬರುತ್ತದೆ. ಮಹಿಳೆಯರಲ್ಲಿ ಕಂಡುಬರುವ ಎಕ್ಸ್ ಎಕ್ಸ್ ಕ್ರೋಮೋಸೋಮ್ ಗಳ ಬದಲಿಗೆ ಇಂತಹ ಸಮಸ್ಯೆ ಇರುವವರರಲ್ಲಿ ಪುರುಷರಲ್ಲಿ ಕಂಡುಬರುವ ಎಕ್ಸ್ ವೈ ಕ್ರೋಮೋಸೋಮ್ ಗಳು ಕಂಡುಬರುತ್ತವೆ. ಇಂತಹ ಸಮಸ್ಯೆಯನ್ನು ಸೆನಿನೋಮಾ ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಮಹಿಳೆಗೆ ಕೀಮೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ. ಆಕೆಯ ದೇಹದಲ್ಲಿ ಹಾರ್ಮೋನುಗಳು ಆಕೆ ಮಹಿಳೆ ಎಂಬ ಭಾವನೆ ಮೂಡಿಸಿದೆ ಎಂದು  ಎಂದು ವೈದ್ಯರು ಹೇಳಿದ್ದಾರೆ. ಅಂತೆಯೇ ಪ್ರಸ್ತುತ ಮಹಿಳೆ ಹಾಗೂ ಆಕೆಯ ಪತಿ ಇಬ್ಬರಿಗೂ ನಾವು ಕೌನ್ಸಲಿಂಗ್ ಮಾಡಿದ್ದು, ಸಮಸ್ಯೆಯ ಬಗ್ಗೆ ತಿಳಿ ಹೇಳಿದ್ದೇವೆ. ಅವರು ಹೇಗೋ ಅದೇ ರೀತಿಯ ಜೀವನ ಸಾಗಿಸುವಂತೆ ಸಲಹೆ ನೀಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

SCROLL FOR NEXT