ದೇಶ

ಟೈಗರ್ ಮೆಮನ್ ಸಹೋದರ, ಮುಂಬೈ ಸರಣಿ ಸ್ಫೋಟದ ಅಪರಾಧಿ ಯುಸುಫ್ ಮೆಮನ್ ಜೈಲಿನಲ್ಲೇ ಸಾವು

Nagaraja AB

ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾಗಿದ್ದ ಯುಸುಫ್ ಮೆಮನ್ ನಾಸಿಕ್
ಜೈಲಿನಲ್ಲಿಂದು ಸಾವಿಗೀಡಾಗಿದ್ದಾನೆ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಸಾವಿಗೆ ಕಾರಣ ತಿಳಿದುಬಂದಿಲ್ಲ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದುಲೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಾಸಿಕ್ ಪೊಲೀಸ್ ಆಯುಕ್ತ ವಿಶ್ವಾಸ್ ನಾಂಗ್ರೆ ಪಾಟೀಲ್ , ಮೆಮನ್ ಸಾವನ್ನು ದೃಢಪಡಿಸಿದ್ದಾರೆ.ಮುಂಬೈ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದವರಲ್ಲಿ ಒಬ್ಬನಾಗಿದ್ದ ಯುಸುಫ್ ಮೆಮೆನ್ ಗೆ ಟಾಡಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೂಸಫ್, 1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ಟೈಗರ್ ಮೆಮನ್ ನ ಕಿರಿಯ ಸಹೋದರ. ಟೈಗರ್ ಮೇಮನ್ ಸದ್ಯ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದಾನೆ.ಯೂಸುಫ್ ಮೆಮನ್ ನ ಹಿರಿಯ ಸಹೋದರ ಯಾಕೂಬ್ ಮೆಮನ್ ನನ್ನು 2015 ರಲ್ಲಿ  ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೆಮನ್ ನ ತಂದೆ ಅಬ್ದುಲ್ ರಜಾಕ್ ಮೆಮನ್ ಮತ್ತು ತಾಯಿ ಹನೀಫಾ ಸೇರಿದಂತೆ ಮೆಮನ್ ಕುಟುಂಬದ ಆರು ಮಂದಿಯನ್ನು ಸಿಬಿಐ 1994ರಲ್ಲಿ ಬಂಧಿಸಿತ್ತು.1993 ಮಾರ್ಚ್ 12 ರಂದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 250 ಜನರು ಮೃತಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು.

SCROLL FOR NEXT