ದೇಶ

ಚೀನಾಗೆ ಸೆಡ್ಡು: ಪೂರ್ವ ಲಡಾಖ್‌ ನಲ್ಲಿ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿದ ಭಾರತ!

Vishwanath S

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಹತ್ಯೆ ನಂತರ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು  ಉಭಯ ದೇಶಗಳು ಗಡಿಯಲ್ಲಿ ಸೇನೆ ಜಮಾವಣೆಯಲ್ಲಿ ನಿರತರವಾಗಿದೆ. 

ಗಡಿಯಲ್ಲಿ ಚೀನಾ ಅದಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದೆ. ಇದೇ ವೇಳೆ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳ ಹಾರಾಟ ಹೆಚ್ಚಾಗುತ್ತಿರುವುದರಿಂದ ಇದಕ್ಕೆ ಪ್ರತ್ಯುತ್ತರ ನೀಡಲು ಭಾರತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದೆ.

ಭಾರತ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸಹ ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಇದೇ ವೇಳೆ ಮುಂಜಾಗೃತ ಕ್ರಮವಾಗಿ ಸುಧಾರಿತ ಅತ್ಯಂತ ತ್ವರಿತ-ಪ್ರತಿಕ್ರಿಯೆ ನೀಡುವ ವಾಯು ರಕ್ಷಣಾ ಕ್ಷಿಪಣಿಯನ್ನು ನಿಯೋಜಿಸಿದೆ. 

ಗಲ್ವಾನ್ ಕಣಿವೆಯಲ್ಲಿ ಜೂ 15ರಂದು ಚೀನಾ ಸೈನಿಕರು ಮತ್ತು ಭಾರತೀಯ ಯೋಧರ ನಡುವೆ ಹೊಡೆದಾಟ, ಕಲ್ಲು ತೂರಾಟಗಳು ನಡೆದಿದ್ದು ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. 

SCROLL FOR NEXT