ದೇಶ

ಕೊರೋನಾ ವೈರಸ್: ಜಾರ್ಖಂಡ್ ನಲ್ಲಿ ಜುಲೈ31ರವರೆಗೂ ಲಾಕ್ ಡೌನ್ ವಿಸ್ತರಣೆ

Srinivasamurthy VN

ರಾಂಚಿ: ಮಾರಕ ಕೊರೋನಾ ವೈರಸ್ ನಿಂದಾಗಿ ಜಾರ್ಖಂಡ್ ನಲ್ಲಿ ಹೇರಲಾಗಿರುವ ಲಾಕ್ ಡೌನ್ ಅನ್ನು ಜುಲೈ 31ರವರೆಗೂ ವಿಸ್ತರಣೆ ಮಾಡಲಾಗಿದೆ.

ಇದೇ ಭಾನುವಾರ ಜಾರ್ಖಂಡ್ ನಲ್ಲಿ ಈ ಹಿಂದೆ  ಹೇರಲಾಗಿದ್ಜ ಲಾಕ್ ಡೌನ್ ಅವಧಿ ಪೂರ್ಣಗೊಳ್ಳಲ್ಲಿದ್ದು, ಇದೇ ಕಾರಣಕ್ಕೆ ಜಾರ್ಖಂಡ್ ಸರ್ಕಾರ ಇಂದು ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಿದೆ. ಜಾರ್ಖಂಡ್ ಸರ್ಕಾರದ ಆದೇಶದ ಪ್ರಕಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಈಗ ನೀಡಿರುವ ವಿನಾಯಿತಿಗಳು ಮುಂದುವರೆಯಲಿದೆ. ರಾತ್ರಿಯ ಕರ್ಫ್ಯೂ ಹಾಗೇಯೇ ಮುಂದುವರೆಯಲಿದೆ.   ಜಾರ್ಖಂಡ್‌ ರಾಜ್ಯದಲ್ಲಿ ಜುಲೈ 1ರಿಂದ ಜುಲೈ 31ರ ತನಕ ಲಾಕ್ ಡೌನ್ ಜಾರಿಗೆ ಬರಲಿದೆ. 

ಇನ್ನು ಜಾರ್ಖಂಡ್ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2, 261ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12 ಜನರು ಮೃತಪಟ್ಟಿದ್ದಾರೆ. 

ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿರುವ 5ನೇ ಹಂತದ ಲಾಕ್ ಡೌನ್ (ಅನ್‌ ಲಾಕ್ 1) ಜೂನ್ 30ರ ತನಕ ದೇಶದಲ್ಲಿ ಜಾರಿಯಲ್ಲಿ ಇರುತ್ತದೆ. ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಜುಲೈ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ದೆಹಲಿ ಸರ್ಕಾರ ಜುಲೈ 31ರ ತನಕ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಹೇಳಿದೆ.

SCROLL FOR NEXT