ದೇಶ

ಮೆಹುಲ್ ಚೊಕ್ಸಿ ಹಣ ನೀಡಿದ್ದ ಬಗ್ಗೆ ಸೋನಿಯಾ ಗಾಂಧಿ ಉತ್ತರ ಕೊಡಬೇಕು:ಜೆ ಪಿ ನಡ್ಡಾ ಒತ್ತಾಯ

Sumana Upadhyaya

ನವದೆಹಲಿ:ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಮುಂದುವರಿದಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಉದ್ಯಮಿ ಮೆಹುಲ್ ಚೊಕ್ಸಿ ಹೆಸರು. ರಾಜೀವ್ ಗಾಂಧಿ ಫೌಂಡೇಶನ್ ಗೆ ಉದ್ಯಮಿ ಮೆಹುಲ್ ಚೊಕ್ಸಿ ಕೂಡ ಹಣ ನೀಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅರೋಪಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಅಕ್ರಮವಾಗಿ ಹಣ ಪಡೆದು ವಂಚಿಸಿ ದೇಶ ಬಿಟ್ಟು ಹೋಗಿರುವ ಮೆಹುಲ್ ಚೊಕ್ಸಿ ಮತ್ತು ಅವರ ಅಳಿಯ ನೀರವ್ ಮೋದಿ ಅವರ ಜೊತೆ ಸೋನಿಯಾ ಗಾಂಧಿಯವರ ಹಣಕಾಸು ಸಂಬಂಧವೇನೆಂದು ತಿಳಿಸಬೇಕೆಂದು ಜೆ ಪಿ ನಡ್ಡಾ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನ್ನು ಗುರಿಯಾಗಿಟ್ಟುಕೊಂಡು 10 ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದೊಂದಿಗೆ ಇರುವ ಸಂಬಂಧವನ್ನು ಬಹಿರಂಗಪಡಿಸಬೇಕೆಂದು ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.

ಮೆಹುಲ್ ಚೊಕ್ಸಿ ಬಗ್ಗೆ ಕೆಲ ತಿಂಗಳ ಹಿಂದೆ ಕಾಂಗ್ರೆಸ್ ತೀವ್ರ ರೀತಿಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಧಾನಿ ವಿರುದ್ಧ ಅಸಹ್ಯಕರ ಭಾಷೆ ಬಳಸಿತ್ತು. ರಾಜೀವ್ ಗಾಂಧಿ ಫೌಂಡೇಶನ್ ಗೆ ಮೆಹುಲ್ ಚೊಕ್ಸಿ ಹಣ ನೀಡಿರುವುದು ಈಗ ಬಹಿರಂಗವಾಗಿದೆ. ಈ ಬಗ್ಗೆ ಸೋನಿಯಾ ಗಾಂಧಿಯವರು ಉತ್ತರ ಕೊಡಬೇಕು. ಮೆಹುಲ್ ಚೊಕ್ಸಿ ಅವರಿಂದ ಹಣ ಪಡೆದು ನಂತರ ಅವರಿಗೆ ಬ್ಯಾಂಕ್ ಸಾಲಕ್ಕೆ ಸಹಾಯ ಮಾಡಿ ನಂತರ ಪ್ರಧಾನಿ ಮೋದಿಯವರನ್ನು ಆರೋಪಿಸುವುದು ಎಷ್ಟು ಸರಿ ಎಂದು ಕೇಳಿದ್ದಾರೆ.

SCROLL FOR NEXT