ದೇಶ

ಮಹಾರಾಷ್ಟ್ರದಲ್ಲಿ ಜುಲೈ 31ರವೆರಗೂ ಲಾಕ್ ಡೌನ್ ವಿಸ್ತರಣೆ

Nagaraja AB

ಮುಂಬೈ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್-19 ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಏರಿಕೆಯಾಗುತ್ತಿರುವಂತೆಯೇ ಜುಲೈ 31ರವರೆಗೂ ಲಾಕ್ ಡೌನ್  ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ.

ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಮುಂಬೈ ಮೆಟ್ರೋಪಾಲಿಟನ್ ವಲಯದ ನೆರಹೊರೆಯ ಪ್ರದೇಶಗಳಲ್ಲಿ ಅವಶ್ಯಕವಲ್ಲದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ಸರ್ಕಾರ ಹೇಳಿದೆ.

ನೆರೆಯಹೊರೆಯ ಪ್ರದೇಶ ವ್ಯಾಪ್ತಿಯಲ್ಲಿ ಶಾಫಿಂಗ್ ಮತ್ತಿತರ ಅವಶ್ಯಕವಲ್ಲದ ಚಟುವಟಿಕೆಗಳಿಗಾಗಿ ಜನರ ಸಂಚಾರವನ್ನು ನಿರ್ಬಂಧಿಸಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. 

ವಿಪತ್ತು,ಆರೋಗ್ಯ ಮತ್ತು ವೈದ್ಯಕೀಯ, ಖಜಾನೆ, ಪೊಲೀಸ್, ಎನ್ ಐಸಿ, ಆಹಾರ ಮತ್ತು ನಾಗರಿಕ ಪೂರೈಕೆ, ಎಫ್ ಸಿಐ, ಮುನ್ಸಿಪಲ್ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಸೇವೆಗಳು ಶೇ, 15 ಅಥವಾ 15 ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಬೇಕು, ಸಾಮಾಜಿಕ ಅಂತರ, ನೈರ್ಮಲ್ಯದ ಮುಂಜಾಗ್ರತೆಯೊಂದಿಗೆ ಗರಿಷ್ಠ ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಅಂತರ್ ಜಿಲ್ಲಾ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 

SCROLL FOR NEXT