ದೇಶ

ಶಿವಸೇನೆಯ ಮುಖವಾಣಿ 'ಸಾಮ್ನಾ' ಸಂಪಾದಕಿಯಾಗಿ ಉದ್ಧವ್ ಠಾಕ್ರೆಪತ್ನಿ ರಶ್ಮಿ ನೇಮಕ

Raghavendra Adiga

ಮುಂಬೈ: ಶಿವಸೇನಾ ಪಕ್ಷದ ಮುಖವಾಣಿ ಸಾಮ್ನಾ ದ ಸಂಪಾದಕರನ್ನಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ  ಹಾಗೂ ಶಿವಸೇನೆ ಪಕ್ಷದ ಮುಖ್ಯಸ್ಥರಾದ  ಉದ್ಧವ್ ಠಾಕ್ರೆ ಅವರ ಪತ್ನಿ  ರಶ್ಮಿ ಠಾಕ್ರೆ ಆಯ್ಕೆಯಾಗಿದ್ದಾರೆ.

ಮರಾಠಿ ಭಾಷೆಯ ಪತ್ರಿಕೆಯ ಭಾನುವಾರದ ಆವೃತ್ತಿಯ ಕೊನೆಯ ಪುಟವು ರಶ್ಮಿ ಠಾಕ್ರೆ ಅವರ ಹೆಸರನ್ನು ಸಂಪಾದಕರಾಗಿ ಮುದ್ರಿಸಿತು,

ಶಿವಸೇನೆಯ ಹಿರಿಯ ಣಾಯಕ  ಸಂಜಯ್ ರೌತ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಮುಂದುವರಿಯಲಿದ್ದಾರೆ.

ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ನಿಧನರಾದಂದಿನಿಂದ ಉದ್ಧವ್ ಠಾಕ್ರೆ ಸಾಮ್ನಾದ  ಸಂಪಾದಕರಾಗಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಅವರು 2019 ರ ನವೆಂಬರ್ 28 ರಂದು ಪತ್ರಿಕಾ ಸಂಪಾದಕನ ಸ್ಥಾನಕ್ಕೆ ರಾಜೀನಾಮೆ ನೀಡಿದರು ನವೆಂಬರ್ 2012 ರಲ್ಲಿ ಬಾಳಾ ಸಾಹೇಬ್ ಠಾಕ್ರೆ ತಾವು ಮರಣಿಸುವವರೆಗೆ ಸಾಮ್ನಾದ ಸ್ಥಾಪಕ ಸಂಪಾದಕರಾಗಿದ್ದರು.

SCROLL FOR NEXT