ದೇಶ

ಹೆಚ್ಎಎಲ್ ನಿಂದ ಅಮೆರಿಕಾದ ಬಲಿಷ್ಠ ಅಪಾಚೆ ರೀತಿಯ ಕಾಪ್ಟರ್ ತಯಾರಿಕೆ

Manjula VN

ನವದೆಹಲಿ: ಭಾರತೀಯ ವಾಯುಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ಅಮೆರಿಕಾದ ಬಲಿಷ್ಠ ಅಪಾಚೆ ಯುದ್ಧ ವಿಮಾನಕ್ಕೆ ಸರಿ ಸಾಟಿಯಾಗುವ ಹೊಸ ಹೆಲಿಕಾಪ್ಟರ್ ಗಳನ್ನು ತಯಾರಿ ಮಾಡುವುದಕ್ಕೆ ಬೆಂಗಳೂರಿನ ಕೇಂದ್ರ ಕಚೇರಿ ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಸಿದ್ಧತೆ ನಡೆಸಿದೆ. 

ಇದಕ್ಕಾಗಿ ಆರಂಬಿಕ ಹಂತಗಳ ಕೆಲಸವನ್ನು ಹೆಚ್ಎಎಲ್ ಈಗಾಗಲೇ ಶುರು ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, 2027ರ ವೇಳೆಗೆ ಸ್ವದೇಶಿ ನಿರ್ಮಿತ ಅಪಾಚೆ ಹೆಲಿಕಾಪ್ಟರ್ ಗಳಷ್ಟೇ ಬಲಿಷ್ಠವಾದ ಯುದ್ಧ ವಿಮಾನಗಳು ಲೋಕಾರ್ಪಣೆಗೊಳ್ಳಲಿದೆ. 

ಎರಡು ಎಂಜಿನ್ ಇರುವ ಹೆಲಿಕಾಪ್ಟರ್ ಇದಾಗಿರಲಿದ್ದು, ವಾಯುದಾಳಿ, ವಾಯು ಸಾರಿಗೆ, ಯುದ್ಧ ಸಾಮಾಗ್ರಿಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿರಲಿದೆ. ಈ ವರ್ಷದೊಳಗೆ ಸರ್ಕಾರದಿಂದ ಅನುಮತಿ ಸಿಕ್ಕಿದರೆ 2027ರ ವೇಳೆಗೆ ಮೊದಲ ಹೆಲಿಕಾಪ್ಟರ್ ತಯಾರಾಗಲಿದೆ. 

SCROLL FOR NEXT