ದೇಶ

ದೆಹಲಿ ಗಲಭೆ ನಿಯಂತ್ರಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು! 

Srinivas Rao BV

ದೆಹಲಿ ಗಲಭೆ ನಿಯಂತ್ರಿಸುವುದಕ್ಕೆ ಕೋರ್ಟ್ ಗಳು ಸುಸಜ್ಜಿತವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೋರ್ಟ್ ಗಳು ಇಂತಹ ಒತ್ತಡಗಳನ್ನು ನಿರ್ವಹಿಸುವುದಕ್ಕೆ ಸುಸಜ್ಜಿತವಾಗಿಲ್ಲ ಎಂದು ಹೇಳಿದ್ದು ವಿಚಾರಣೆಯನ್ನು ಮಾ.04 ಕ್ಕೆ ಮುಂದೂಡಿದೆ. 

ಹಿಂಸಾಚಾರ, ಕೋಮುಗಲಭೆಗಳನ್ನು ನಿಯಂತ್ರಿಸುವಷ್ಟು ಕೋರ್ಟ್ ಗಳು ಸುಸಜ್ಜಿತವಾಗಿಲ್ಲ, ಅದೇನಿದ್ದರೂ ಕಾರ್ಯಾಂಗದ ಕೆಲಸ, ನಿಮ್ಮ ಅರ್ಜಿ ವಿಚಾರಣೆ ನಡೆಸುತ್ತೇವೆ. ಶಾಂತಿ ಬಯಸುತ್ತೇವೆ, ನಮಗೆ ಮಿತಿಗಳಿವೆ ಎಂದು ಮುಖ್ಯನ್ಯಾಯಮೂರ್ತಿ ಎಸ್ಎ ಬೋಬ್ಡೆ, ಬಿಆರ್ ಗವಾಯಿ, ಸೂರ್ಯಕಾಂತ್ ಅವರಿದ್ದ ಪೀಠ ಹೇಳಿದೆ. 
 

SCROLL FOR NEXT