ದೇಶ

ನಾಲ್ಕು ತಿಂಗಳಲ್ಲೇ ಅಧಿಕ, ಫೆಬ್ರವರಿಯಲ್ಲಿ ಶೇ, 7.78ಕ್ಕೆ ಏರಿಕೆಯಾದ ನಿರುದ್ಯೋಗ ಪ್ರಮಾಣ!

Nagaraja AB

ನವದೆಹಲಿ: ದೇಶದಲ್ಲಿ ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನವರಿ ತಿಂಗಳಲ್ಲಿ ಶೇ. 7. 16 ರಷ್ಟಿದ್ದ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 78ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಈವರೆಗೂ ಇಷ್ಟು ಪ್ರಮಾಣದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿರಲಿಲ್ಲ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ ಇಂದು ತಿಳಿಸಿದೆ.

ಮುಂಬೈ ಮೂಲದ ಖಾಸಗಿ ಥಿಂಕ್ ಥ್ಯಾಂಕ್ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಜನವರಿ ತಿಂಗಳಲ್ಲಿ ಶೇ. 5. 97 ರಷ್ಟಿದ್ದ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಲ್ಲಿ ಶೇ. 7. 37 ರಷ್ಟು ಏರಿಕೆಯಾಗಿದೆ. ಆದಾಗ್ಯೂ, ನಗರ ಪ್ರದೇಶದಲ್ಲಿ ಇದು ವಿರುದ್ಧವಾಗಿದೆ. ಶೇ. 9. 7 ರಿಂದ ಶೇ, 8.65ಕ್ಕೆ ಇಳಿಕೆಯಾಗಿದೆ 

ಕೊರೋನಾ ವೈರಸ್ ಭೀತಿಯ ನಡುವೆ ಆರ್ಥಿಕ ಕುಸಿತ ಮುಂದುವರೆಯಲಿದೆ ಎಂದು ವಿಶ್ಲೇಷಕರು ಊಹಿಸಿದ್ದಾರೆ.

SCROLL FOR NEXT