ದೇಶ

ನಕಲಿ ಪಾಸ್ಪೋರ್ಟ್, ನಕಲಿ ಕರೆನ್ಸಿ ತಡೆಗೆ ಹೊಸ ಕ್ರಮಕ್ಕೆ ಕೇಂದ್ರದ ಚಿಂತನೆ!

Srinivas Rao BV

ನಕಲಿ ಪಾಸ್ಪೋರ್ಟ್, ನಕಲಿ ಕರೆನ್ಸಿ ತಡೆಗಟ್ಟಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 

ಸಿಎಸ್ಐಆರ್-ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿಯ ಸಂಶೋಧಕರು ಹೊಸ ಮಾದರಿಯ ವಿಶೇಷ ಶಾಯಿ(ಮಸಿ)ಯನ್ನು ಅಭಿವೃದ್ಧಿಪಡಿಸಿದ್ದು, ಇದರ ಬಳಕೆಯಿಂದಾಗಿ ನಕಲಿ ಕರೆನ್ಸಿ ಹಾಗೂ ನಕಲಿ ಪಾಸ್ಪೋರ್ಟ್ ಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಪಿಐಬಿ ಟ್ವೀಟ್ ಮೂಲಕ ತಿಳಿದುಬಂದಿದೆ. 

254 ನ್ಯಾನೋಮೀಟರ್, 365 ನ್ಯಾನೋ ಮೀಟರ್ ಗಳಲ್ಲಿ ಪ್ರಕಾಶಿತವಾದಾಗ ಕೆಂಪು ಮತ್ತು ಗ್ರೀನ್ ಬಣ್ಣದಲ್ಲಿ ಕಾಣುವಂತೆ ದ್ವಿ-ಪ್ರಕಾಶಕ ಭದ್ರತಾ ಶಾಯಿಯನ್ನು ಅಭಿವೃದ್ಧಿಪಡಿಸಿದ್ದಾರೆ. 

ರಾಜ್ಯಸಭೆಯಲ್ಲಿ ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ ವರ್ಧನ್ ಹೇಳಿಕೆ ನೀಡಿದ್ದು, ಸರ್ಕಾರಿ ದಾಖಲೆಗಳು, ಗುರುತಿನ ಚೀಟಿ, ಪಾಸ್ಪೋರ್ಟ್ ಗಳ ದೃಢೀಕರಣಕ್ಕೆ ಈ ವಿಶೇಷವಾದ ಶಾಯಿ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ. 
 

SCROLL FOR NEXT