ದೇಶ

ಸುಪ್ರೀಂ ಕೋರ್ಟ್ ನಲ್ಲಿ ಆರ್ ಬಿಐಗೆ ಹಿನ್ನಡೆ: ಕ್ರಿಪ್ಟೊಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಅನುಮತಿ, ನಿಷೇಧ ಹಿಂತೆಗೆತ  

Sumana Upadhyaya

ನವದೆಹಲಿ:ಬ್ಯಾಂಕುಗಳು ಕ್ರಿಪ್ಟೊಕರೆನ್ಸಿಗಳಲ್ಲಿ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕೆಂದು ಆದೇಶ ನೀಡಿ 2018ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಅಲ್ಲದೆ ಕ್ರಿಪ್ಟೊಕರೆನ್ಸಿಗಳಲ್ಲಿ ವಹಿವಾಟು ನಡೆಸಲು ಅನುಮತಿ ನೀಡಿ 2018ರ ಆರ್ ಬಿಐ ಆದೇಶವನ್ನು ಹಿಂತೆಗೆದುಕೊಂಡಿದೆ. 


ನ್ಯಾಯಾಧೀಶರಾದ ರೊಹಿಂಟೊನ್ ಫಾಲಿ ನಾರಿಮನ್, ಎಸ್ ರವೀಂದ್ರ ಭಟ್ ಮತ್ತು ವಿ ರಾಮಸುಬ್ರಹ್ಮಣ್ಯಂ ಅವರನ್ನೊಳಗೊಂಡ ನ್ಯಾಯಪೀಠ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ(ಐಎಎಂಎಐ) ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2018ರಲ್ಲಿ ಸುತ್ತೋಲೆ ಹೊರಡಿಸಿ ಕ್ರಿಪ್ಟೊಕರೆನ್ಸಿಗಳೊಂದಿಗೆ ವ್ಯವಹಾರ ನಡೆಸಬಾರದೆಂದು ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2018ರ ಏಪ್ರಿಲ್ 6ರಂದು ಭಾರತದಲ್ಲಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಕ್ರಿಪ್ಟೊಕರೆನ್ಸಿಗಳ ವಹಿವಾಟುಗಳಿಗೆ ನಿಷೇಧ ಹೇರಿತ್ತು.ಕೇಂದ್ರ ಹಣಕಾಸು ಸಚಿವಾಲಯ ಆರ್ ಬಿಐ ನಿರ್ಧಾರವನ್ನು ಬೆಂಬಲಿಸಿತ್ತು. ವರ್ಚುವಲ್ ಕರೆನ್ಸಿಗಳ ವಹಿವಾಟು ಕಾನೂನುಬಾಹಿರ ಎಂದು ಹೇಳಿತ್ತು. 
 

SCROLL FOR NEXT