ದೇಶ

ನಿರ್ಭಯಾ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸುವ ವಿಚಾರ: ಮಾ. 23ಕ್ಕೆ ಸುಪ್ರೀಂ ವಿಚಾರಣೆ

Raghavendra Adiga

ನವದೆಹಲಿ: ನಿರ್ಭಯಾ ಅಪರಾಧಿಗಳಿಗೆ ಏಕಕಾಲಕ್ಕೆ ನಾಲ್ವರನ್ನೂ ಗಲ್ಲಿಗೇರಿಸಬೇಕೆನ್ನುವ ದೆಹಲಿ  ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದ ಮೇಲ್ಮನವಿಯನ್ನು ಮಾರ್ಚ್ 23 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ನಿರ್ಭಯಾ ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ನಿರ್ದೇಶನಗಳನ್ನು ಕೋರಿದ ಗೃಹ ಸಚಿವಾಲಯ ಸಲ್ಲಿಸಿದ ಮೇಲ್ಮನವಿಯನ್ನು  ಮಾರ್ಚ್ 23ಕ್ಕೆ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ

ಇನ್ನೊಂದೆಡೆ ಇಂದು ದೆಹಲಿ ನ್ಯಾಯಾಲಯ ನಾಲ್ವರು ನಿರ್ಭಯಾ ಅಪರಾಧಿಗಳನ್ನು ಂಆರ್ಚ್ 0, 2020 ರಂದು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಿ ಎಂದು ಹೊಸ ಡೆತ್ ವಾರಂಟ್ ಜಾರಿ ಮಾಡಿದೆ.

ನಿರ್ಭಯಾ ಅಪರಾಧಿಗಳ ಗಲ್ಲುಶಿಕ್ಷೆಗೆ ಜಾರಿಯಾಗುತ್ತಿರುವ ನಾಲ್ಕನೇ ಡೆತ್ ವಾರಂಟ್ ಇದಾಗಿದ್ದು ಈ ಹಿಂದೆ ಜನವರಿ 22,  ಫೆಬ್ರವರಿ 1 ಹಾಗೂ  ಮಾರ್ಚ್ 3ರಂದು ಗಲ್ಲಿಗೇರಿಸಲು ಡೆತ್ ವಾರಂಟ್ ಜಾರಿಯಾಗಿತ್ತು.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಏಕಕಾಲದಲ್ಲಿ ಮರಣದಂಡನೆ ಜಾರಿಯಾಗಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾರ್ಚ್ 23 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. ನ್ಯಾಯಮೂರ್ತಿ ಆರ್. ಬಾನುಮತಿ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಪರಾಧಿಗಳು ತಮ್ಮೆಲ್ಲಾ ಕಾನೂನು ಪರಿಹಾರ ಮಾರ್ಗಗಳನ್ನು ಬಳಸಿದ್ದಾರೆ. ಇಂದು ದೆಹಲಿ ವಿಚಾರಣಾ ನ್ಯಾಯಾಲಯ ಮಾರ್ಚ್ 20ಕ್ಕೆ ಗಲ್ಲು ದಿನಾಂಕ ನಿಗದಿಪಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಮೆಹ್ತಾ ಅವರ ವಾದಗಳನ್ನು ಆಲಿಸಿದ ನ್ಯಾಯಾಲಯ ಮಾರ್ಚ್ 23 ರಂದು ಮಾನದ್ಂಡಗಳನ್ನು ನೀಡುವುದಾಗಿಯೂ ಯಾವ ಕಾರಣಕ್ಕೆ ಪ್ರಕರಣ ಮುಂದೂಡಿಕೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಸಾಮಾನ್ಯವಾಗಿ ಕ್ರಿಮಿನಲ್ ಅಪರಾಧಗಳಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳಿಗೆ ಒಂದೇ ಪ್ರಕರಣವಾಗಿದ್ದಲ್ಲಿ ಬೇರೆ ಬೇರೆಯಾಗಿ ನೇಣಿಗೇರಿಸುವುದಿಲ್ಲ ಬದಲಾಗಿ ಮರಣದಂಡನೆಗೆ ಈಡಾದ  ಎಲ್ಲ ವ್ಯಕ್ತಿಗಳು ಎಲ್ಲಾ ಕಾನೂನು ಪರಿಹಾರಗಳನ್ನು ಪಡೆದ ಬಳಿಕ ಎಲ್ಲರನ್ನೂ ಒಟ್ಟಾಗಿಯೇ ಗಲ್ಲಿಗೇರಿಸಬೇಕು ಎಂದು 1982 ರ ಸುಪ್ರೀಂ ಕೋರ್ಟ್‌ನ ತೀರ್ಪು ಹೇಳುತ್ತದೆ. ನಿರ್ಭಯಾ ಪ್ರಕರಣದಲ್ಲಿ ರಾಷ್ಟ್ರಪತಿಗಳು ನಾಲ್ವರು ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.ಇದರರ್ಥ ಕಾನೂನಿನ ಪ್ರಕಾರ, ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ವಜಾ ಆದ ದ 14 ದಿನಗಳ ಅವಧಿ ಮುಗಿದ ಬಳಿಕ ಮಾತ್ರವೇ ಗಲ್ಲಿಗೆ ಏರಿಸಲು ಅವಕಾಶವಿದೆ.

SCROLL FOR NEXT