ದೇಶ

ಕೊರೋನಾ ವೈರಸ್: ಸಂತಾಪ ಪತ್ರಕ್ಕಾಗಿ ಮೋದಿಗೆ ಧನ್ಯವಾದ ಹೇಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Lingaraj Badiger

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿದ್ದ ಸಂತಾಪ ಪತ್ರಕ್ಕೆ ಚೀನಾ ಧನ್ಯವಾದ ತಿಳಿಸಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸಂದೇಶದಲ್ಲಿ ಚೀನಾವು ಭಾರತ ಸೇರಿದಂತೆ ವಿಶ್ವದ ಸಮುದಾಯದೊಂದಿಗೆ ಜಂಟಿಯಾಗಿ ಅಪಾಯವನ್ನು ಎದುರಿಸುತ್ತದೆ ಎಂದು ಹೇಳಿದ್ದಾರೆ.

ಕೋವಿದ್ 19 ಕುರಿತು ಪ್ರಧಾನಿ ಮೋದಿ ಚೀನಾಗೆ ಸಂತಾಪ ಪತ್ರ ಬರೆದಿದ್ದಕ್ಕಾಗಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು
ಮೋದಿ ಅವರಿಗೆ ಟ್ವೀಟ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಭಾರತದ ಚೀನಾದ ರಾಯಭಾರಿ ಸನ್ ವೀಡಾಂಗ್ ತಿಳಿಸಿದ್ದಾರೆ.

ಚೀನಾವು ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಜಂಟಿಯಾಗಿ ಸಾಂಕ್ರಾಮಿಕ ವೈರಸ್ ಅನ್ನು ಎದುರಿಸಲು ಸಂಪೂರ್ಣ ವಿಶ್ವಾಸ, ಸಾಮರ್ಥ್ಯ ಮತ್ತು ದೃಢ ನಿಶ್ಚಯವನ್ನು ಮಾಡಿದೆ ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಚೀನಾದ ಅಧ್ಯಕ್ಷರಿಗೆ ಮೋದಿ ಅವರು ಬರೆದ ಪತ್ರದಲ್ಲಿ, ವೂಹಾನ್ ನಗರದಲ್ಲಿ ಕರೋನವೈರಸ್ ಏಕಾಏಕಿ ಆಕ್ರಮಣ ಮಾಡಿದರ ಬಗ್ಗೆ ಜಿನ್ಪಿಂಗ್ ಮತ್ತು ಚೀನಾದ ಜನರೊಂದಿಗೆ ತಾವಿರುವುದಾಗಿ ಮೋದಿ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದರು.

ಮಾರಣಾಂತಿಕ ಸೋಂಕಿನ ಸವಾಲನ್ನು ಎದುರಿಸಲು ಪ್ರಧಾನಿ ಮೋದಿ ಭಾರತದಿಂದ ನೆರವು ನೀಡುವುದಾಗಿ ತಿಳಿಸಿದ್ದರು.

ವೈರಸ್ ನಿಂದಾಗಿ ಚೀನಾದ ದೇಶದಲ್ಲಿ ಈವರೆಗೆ 3,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

SCROLL FOR NEXT