ದೇಶ

ಮನೆಮಂದಿಯ ಅಂಕಿಅಂಶ ಸಿದ್ದಪಡಿಸುತ್ತದೆ ಎನ್ ಪಿಆರ್ 2020: ಗೃಹ ಸಚಿವಾಲಯ 

Sumana Upadhyaya

ನವದೆಹಲಿ: ಮುಂಬರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ನಲ್ಲಿ ಪೋಷಕರ ಹುಟ್ಟಿದ ಸ್ಥಳ ಮತ್ತು ದಿನಾಂಕದ ವಿವರಗಳನ್ನು ಸಂಗ್ರಹಿಸುವುದು ಅಂಕಿಅಂಶಗಳ ಸಂಸ್ಕರಣೆ ಮತ್ತು ಪ್ರತಿ ಮನೆಗಳ ಅಂಕಿಅಂಶಗಳ ಸಂಗ್ರಹಕ್ಕೆ ಅನುಕೂಲವಾಗಲು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಂಸದೀಯ ಸಮಿತಿಗೆ ತಿಳಿಸಿದೆ.


ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಹಲವು ಬಿಜೆಪಿಯೇತರ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು ಜನರಲ್ಲಿ ಕೂಡ ಆತಂಕ ಉಂಟಾಗಿದೆ. ಈ ನಿಟ್ಟಿನಲ್ಲಿ ಸಂದೇಹ, ಸಂಶಯಗಳನ್ನು ದೂರ ಮಾಡಲು ಕೇಂದ್ರ ಗೃಹ ಇಲಾಖೆ, 2010ರ ಜನಸಂಖ್ಯಾ ನೋಂದಣಿ ಸಮಯದಲ್ಲಿ ಪೋಷಕರ ಹುಟ್ಟಿದ ಸ್ಥಳ ಮತ್ತು ದಿನಾಂಕವನ್ನು ಸಂಗ್ರಹಿಸದ್ದರಿಂದ ಈಗ ಕೇಳಲಾಗುತ್ತಿದೆ ಎಂದಿದೆ.


ಪೋಷಕರ ವಿವರಗಳನ್ನು ಇನ್ನಷ್ಟು ಸವಿಸ್ತಾರವಾಗಿ ಮುಂಬರುವ ಎನ್ ಪಿಆರ್ ಪ್ರಕ್ರಿಯೆಯಲ್ಲಿ ಸಂಗ್ರಹಿಸಲಾಗುತ್ತಿದ್ದು ಅದು ಮುಂದಿನ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ, ಅದರ ಜೊತೆಗೆ ಮೊದಲನೇ ಹಂತದ ಜನಗಣತಿ ಕೂಡ ನಡೆಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.


ಕಾಂಗ್ರೆಸ್ ನಾಯಕ ಆನಂದ್ ಶರ್ಮ ನೇತೃತ್ವದ ಸಂಸದೀಯ ಸಮಿತಿ, ಎನ್ ಪಿಆರ್ ಕುರಿತು ಜನರಲ್ಲಿ ಸಾಕಷ್ಟು ಅಸಮಾಧಾನ ಮತ್ತು ಭಯ, ಆತಂಕಗಳಿವೆ. ಅದು ದೇಶಾದ್ಯಂತ ರಾಷ್ಟ್ರೀಯ ದಾಖಲಾತಿ ಗಣತಿಗೆ ವಿವಾದಕ್ಕೆಡೆ ಮಾಡಿಕೊಡಬಹುದು ಎಂದು ಹೇಳಿತ್ತು.


ಎನ್ ಪಿಆರ್ 2020ಕ್ಕೆ ಏನೇನು ಕೇಳುತ್ತಾರೆ; ನಿವಾಸಿಯ ಸ್ಥಳ, ಮಾತೃಭಾಷೆ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್, ಚುನಾವಣಾ ಗುರುತು ಪತ್ರ, ಚಾಲನೆ ಪರವಾನಗಿ ಪತ್ರ ಸಂಖ್ಯೆ, ತಂದೆ ಮತ್ತು ತಾಯಿಯ ಜನ್ಮ ದಿನಾಂಕ ಮತ್ತು ಸ್ಥಳ.

SCROLL FOR NEXT