ದೇಶ

ಪುಲ್ವಾಮಾ ಉಗ್ರ ದಾಳಿ ಪ್ರಕರಣ: ಎನ್‌ಐಎನಿಂದ ಮತ್ತೆ ಇಬ್ಬರ ಬಂಧನ

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ವರ್ಷ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆಸಿದ ಉಗ್ರ ದಾಳಿಗೆ ಸಂಬಂಧಿಸಿದಂತೆ ಪುಲ್ವಾಮಾದ ಇಬ್ಬರು ನಿವಾಸಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶುಕ್ರವಾರ ಬಂಧಿಸಿದೆ.

ದಾಳಿಗೆ ಸಂಬಂಧಿಸಿದಂತೆ ಪುಲ್ವಾಮಾ ನಿವಾಸಿ ಮತ್ತು ಆತನ ಮಗಳನ್ನು ಬಂಧಿಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಪುಲ್ವಾಮಾ ನಿವಾಸಿಗಳಾದ ವಾಜಿದ್ ಇಸ್ಲಾಂ ಮತ್ತು ಮೊಹಮ್ಮದ್ ಅಬ್ಬಾಸ್ ರಾಥರ್ ಎಂದು ಗುರುತಿಸಲಾಗಿದ್ದು. ಈ ಇಬ್ಬರು ವ್ಯಕ್ತಿಗಳನ್ನು ಶುಕ್ರವಾರ ಸಂಜೆ ನಿರ್ದಿಷ್ಟ ಮಾಹಿತಿ ಮೇರೆಗೆ ಎನ್ಐಎ ಬಂಧಿಸಿದೆ. ಇವರಿಬ್ಬರನ್ನು ಶನಿವಾರ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್, ಸಮೀರ್ ಅಹ್ಮದ್ ದಾರ್ ಮತ್ತು ಕಮ್ರಾನ್(ಪಾಕಿಸ್ತಾನಿ) ಅವರ ಮನೆಯಲ್ಲಿ ಈ ಆರೋಪಿಗಳು ಹಲವಾರು ಬಾರಿ ಆಶ್ರಯ ಪಡೆದಿದ್ದರು. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್ ಮತ್ತು ಇತರರು ಸೇರಿದಂತೆ ಜೈಶ್ ಉಗ್ರರಿಗೆ ಸುರಕ್ಷಿತ ಆಶ್ರಯವನ್ನು ರಾಥರ್ ಒದಗಿಸಿದ್ದಾರೆ ಎನ್ನಲಾಗಿದೆ.

ಪುಲ್ವಾಮಾ ಉಗ್ರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.

SCROLL FOR NEXT