ಹೈದ್ರಾಬಾದ್: ಕುಡಿತಕ್ಕೆ ಹಣ ನೀಡದ ಪತ್ನಿಯೊಂದಿಗೆ ಜಗಳ ಮಾಡಿಕೊಂಡ 32 ವರ್ಷದ ಕುಡುಕ ವ್ಯಕ್ತಿಯೊಬ್ಬ 7ರಿಂದ 10 ವರ್ಷದೊಳಗೆ ತನ್ನ ಮೂವರು ಪುತ್ರಿಯರನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಕಾಮರೆಡ್ಡಿ ಜಿಲ್ಲೆಯಲ್ಲಿ ಇಂದು ನಡೆದಿದೆ.
ಕೆರೆಯೊಂದರ ಹತ್ತಿರ ತನ್ನ ಮೂವರು ಪುತ್ರಿಯರನ್ನು ಕರೆದುಕೊಂಡು ಹೋದ ಕೂಲಿ ಕಾರ್ಮಿಕ, ಅದರಲ್ಲಿ ಅವರನ್ನು ತಳ್ಳಿ ನಂತರ ಅಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯಕ್ಕಾಗಿ ಹಣ ನೀಡುವಂತೆ ಪತ್ನಿಯೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದ ಆತ ಜಗಳವಾಡುತ್ತಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಮನೆಯಲ್ಲಿ ಮೂವರು ಪುತ್ರಿಯರನ್ನು ಇರದಿದ್ದನ್ನು ಕಂಡ ತಾಯಿ, ಕೆರೆ ಬಳಿ ಹುಡುಕಾಟ ನಡೆಸಿದಾಗ ಕೆರೆ ಬಳಿ ತನ್ನ ಪುತ್ರಿಯೊಬ್ಬಳ ಚಪ್ಪಲಿಯನ್ನು ಗುರುತಿಸಿದ್ದಾರೆ. ನಂತರ ಸ್ಥಳೀಯ ಜನರು ನೆರವಿನೊಂದಿಗೆ ತೀವ್ರ ಹುಡುಕಾಟ ನಡೆಸಿದಾಗ ಮೂವರು ಪುತ್ರಿಯರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ತನಿಖೆ ಕೈಗೊಳ್ಳಲಾಗಿದ್ದು, ಆರೋಪಿಯ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.