ದೇಶ

ಮಧ್ಯಪ್ರದೇಶ ಆಪರೇಷನ್ ಕಮಲ: ನಾಪತ್ತೆಯಾಗಿದ್ದ ಶಾಸಕ ಪ್ರತ್ಯಕ್ಷ, ಅಪಹರಣ ಸುದ್ದಿ ತಳ್ಳಿಹಾಕಿದ ಸುರೇಂದ್ರ ಸಿಂಗ್

Srinivas Rao BV

ಭೋಪಾಲ್: ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಯತ್ನಿಸಲಾಗುತ್ತಿದ್ದು, ನಾಪತ್ತೆಯಾಗಿದ್ದ ನಾಲ್ವರು ಶಾಸಕರ ಪೈಕಿ ಓರ್ವರಾಗಿದ್ದ ಸುರೇಂದ್ರ ಸಿಂಗ್ ವಾಪಸ್ಸಾಗಿದ್ದಾರೆ. 

ಬುರ್ಹಾನ್ ಪುರದ ಪಕ್ಷೇತರ ಶಾಸಕರಾಗಿರುವ ಸುರೇಂದ್ರ ಸಿಂಗ್ ತಾವು ಕಾಂಗ್ರೆಸ್ ಜೊತೆಗಿರುವುದಾಗಿ ಪುನರುಚ್ಛರಿಸಿದ್ದಾರೆ. 

ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಶಾಸಕರಾದ ಹರ್ದೀಪ್ ಸಿಂಗ್ ದಂಗ್, ಬಿಸಹುಲಾಲ್ ಸಿಂಗ್ ರಘುರಾಜ್ ಕಸ್ನಾನಾ ಇನ್ನೂ ಪತ್ತೆಯಾಗಿಲ್ಲ. 

ಈಗ ವಾಪಸ್ಸಾಗಿರುವ ಶಾಸಕ ಸುರೇಂದ್ರ ಸಿಂಗ್ ತಮ್ಮ ಅಪಹರಣ ಸುದ್ದಿಯನ್ನು ತಳ್ಳಿಹಾಕಿದ್ದು, ಯಾರೂ ತಮ್ಮನ್ನು ಅಪಹರಿಸಿರಲಿಲ್ಲ ಎಂದು ಹೇಳಿದ್ದಾರೆ. ನಾನು ಅಪಹರಣಕ್ಕೆ ಒಳಗಾಗಿರಲಿಲ್ಲ, ಸಿಂಹವನ್ನು ಯಾರೂ ಅಪಹರಿಸಲು ಸಾಧ್ಯವಿಲ್ಲ ಆದರೆ ಬೆಂಗಳೂರಿನಿಂದ ನಾನು ಬರಬೇಕಿದ್ದ ವಿಮಾನಕ್ಕೆ ಸರಿಯಾದ ಸಮಯದಲ್ಲಿ ತೆರಳದಂತೆ ಮಾಡಲಾಯಿತು. ಮಾರ್ಗ ಮಧ್ಯದಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ತಡೆದು ನಿಲ್ಲಿಸಲಾಯಿತು ಆದ್ದರಿಂದಲೇ ವಿಮಾನ ತಪ್ಪಿತು ಎಂದು ಹೇಳಿದ್ದಾರೆ. 
 

SCROLL FOR NEXT