ದೇಶ

ಕೊರೋನಾ ವೈರಸ್ ಕುರಿತು ಅರಿವು ಮೂಡಿಸಲು ಕಾಲರ್ ಟ್ಯೂನ್ ಬಳಕೆ

Manjula VN

ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. 

ಈ ಸೂಚನಯನ್ನು ಈಗಾಗಲೇ ಬಿಎಸ್ಎನ್ಎಲ್, ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಅನುಸರಿಸುತ್ತಿದ್ದು, ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸಲು ಈಗಾಗಲೇ ಟ್ಯೂನ್ ಬಳಕೆ ಮಾಡುತ್ತಿದೆ. ಆದರೆ, ಒಂದು ವೇಳೆ ಬಳಕೆದಾರರು ಈಗಾಗಲೇ ಕಾಲರ್ ಟ್ಯೂನ್ ನ್ನು ಪ್ರತ್ಯೇಕವಾಗಿ ಹಾಕಿಸಿಕೊಂಡು ಚಂದಾದಾರರಾಗಿದ್ದರೆ, ಈ ಸಂದೇಶ ಅಪ್ಲೈ ಆಗುವುದಿಲ್ಲ ಎನ್ನಲಾಗುತ್ತಿದೆ. 

ವೈರಸ್ ಹರಡದಂತೆ ನೋಡಿಕೊಳ್ಳಲು ಏನನ್ನು ಮಾಡಬಹುದು ಎಂಬುದನ್ನು ಕಾಲರ್ ಟ್ಯೂನ್ ಸಂದೇಶ ನೀಡಲಿಗೆ. ಕೆಮ್ಮುವಾಗ ಅಥವಾ ಸೀನುವಾರ ನಿಮ್ಮ ಮುಖವನ್ನು ಕರವಸ್ತ್ರ ಅಥವಾ ಟಿಶ್ಯುವಿನಿಂದ ಮುಚ್ಚಿಕೊಳ್ಳಿ. ನಿಯಮಿತವಾಗಿ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ ಎಂದು ಸಂದೇಶದಲ್ಲಿ ಹೇಳುತ್ತದೆ. ದೇಶದ ಜನತೆಯಲ್ಲಿ ಜಾಗೃತಿ ಮೂಡಿಸಲು ಈ ಸಂದೇಶವನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ತಿಳಿಸಲಾಗುತ್ತಿದೆ. 

ನಿಮ್ಮ ಮುಖ, ಕಣ್ಣು ಅಥವಾ ಮೂಗನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಯಾರಿಗಾದರೂ ಕೆಮ್ಮು,ಜ್ವರ ಅಥವಾ ಉಸಿರಾಟಕ ಸಮಸ್ಯೆಯಿದೆ ಎಂಬುದು ತಿಳಿದುಬಂದಿದ್ದೇ ಆದರೆ, ಅವರಿಂದ 1 ಮೀಟರ್ ಅಂತರವನ್ನು ಕಾಪಾಡಿಕೊಳ್ಳಿ. ಅಗತ್ಯವಿದ್ದರೆ, ಕೂಡಲೇ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಸಹಾಯವಾಣಿ ಸಂಖ್ಯೆ +91 -11-23797-8046 ಸಂಪರ್ಕಿಸಿ ಎಂದು ಹೇಳುತ್ತದೆ. 

SCROLL FOR NEXT