ದೇಶ

ಕೊರೊನಾ ವೈರಸ್ ಭೀತಿ: ಇರಾನ್ ನಿಂದ 58 ಭಾರತೀಯರನ್ನು ಕರೆತಂದ ವಾಯುಪಡೆ ವಿಮಾನ 

Sumana Upadhyaya

ನವದೆಹಲಿ: ಕೊರೋನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಇರಾನ್ ರಾಜಧಾನಿ ತೆಹ್ರಾನ್ ನಿಂದ 58 ಭಾರತೀಯರನ್ನು ಹೊತ್ತ ಸಿ 17 ಭಾರತೀಯ ವಾಯುಪಡೆ ವಿಮಾನ ಮಂಗಳವಾರ ಬೆಳಗ್ಗೆ ಹಿಂಡನ್ ಬೇಸ್ ತಲುಪಿದೆ.

“ಸಿ-17 ವಿಮಾನವು ಇರಾನ್ ನಿಂದ ಮತ್ತತೆ ಹಿಂಡನ್ ಗೆ ಹಿಂದಿರಗಿದೆ” ಎಂದು ಭಾರತೀಯ ವಾಯುಪಡೆಯ ವಕ್ತಾರ ಗ್ರೂಪ್ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ತಿಳಿಸಿದ್ದಾರೆ. 

ವಿಮಾನವು ಹಿಂಡನ್ ಬೇಸ್ ತಲುಪುವ ಮೊದಲು ಈ ಕುರಿತು ಟ್ವೀಟ್ ಮಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್, “ತೆಹ್ರಾನ್ ನಿಂದ ಮೊದಲ ಬ್ಯಾಚ್ ನ 58 ಭಾರತೀಯ ಯಾತ್ರಿಕರನ್ನು ಹೊತ್ತ ಸಿ-17 ಸದ್ಯದಲ್ಲೇ ಹಿಂಡಾನ್ ತಲುಪಲಿದೆ” ಎಂದು ಟ್ವೀಟ್ ಮಾಡಿದ್ದರು. 

ಭಾರತೀಯರನ್ನು ಕರೆತರಲು ಶ್ರಮಿಸಿರುವ ಇರಾನ್ ನ ಭಾರತೀಯ ರಾಯಭಾರ ಕಚೇರಿಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೊರೋನಾ ವೈರಸ್ ನಿಂದಾಗಿ ಇರಾನ್ ನಲ್ಲಿ 194 ಜನರು ಅಸುನೀಗಿರುವುದಾಗಿ ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜೊನಾನ್ ಪೌರ್ ಸುದ್ದಿಗೋಷ್ಠಿಗೆ ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ 743 ಹೊಸ ಸೋಂಕು ಪೀಡಿತ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತ ಸೋಂಕಿಗೆ ಒಳಗಾದವರ ಸಂಖ್ಯೆ 6,566ಕ್ಕೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT