ದೇಶ

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸಾಮಾನ್ಯ ಕಾರ್ಯತಂತ್ರ: ಸಾರ್ಕ್ ರಾಷ್ಟ್ರಗಳಿಗೆ ಮೋದಿ ನೇತೃತ್ವ

Nagaraja AB

ನವದೆಹಲಿ: ಕೊರೋನಾ ವೈರಸ್  ವಿರುದ್ಧ ಹೋರಾಡಲು ಸಾಮಾನ್ಯ ಕಾರ್ಯತಂತ್ರ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ರಾಷ್ಟ್ರಗಳನ್ನು ಮುನ್ನಡೆಸಲಿದ್ದಾರೆ

ಕೊವಿದ್‍-19 ವಿರುದ್ಧ ಹೋರಾಡಲು ಸಾರ್ಕ್ ರಾಷ್ಟ್ರಗಳ ಪ್ರದೇಶದಲ್ಲಿ ಪ್ರಬಲವಾದ ಸಾಮಾನ್ಯ ತಂತ್ರವನ್ನು ರೂಪಿಸಲು 'ಮಾರ್ಚ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರನ್ನು ವಿಡಿಯೋ ಸಮ್ಮೇಳನದ ಮೂಲಕ ಮಾತನಾಡಿ, ಭಾರತದ ನೇತೃತ್ವ ವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ

ದಕ್ಷಿಣ ಏಷ್ಯಾ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ, ರೋಗ ಹರಡುವಿಕೆ ಎದುರಿಸುವ ನಿಟ್ಟಿನಲ್ಲಿ ಸಮನ್ವಯ ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನರೇಂದ್ರ ಮೋದಿ ಶುಕ್ರವಾರ ಏಷ್ಯಾ ರಾಷ್ಟ್ರಗಳ ನಾಯಕರ ಸಮಾವೇಶವನ್ನು ಪ್ರಸ್ತಾಪಿಸಿದ್ದರು.

SCROLL FOR NEXT