ದೇಶ

ಕೊರೊನವೈರಸ್‍: ತ್ರಿಪುರಾದಲ್ಲಿ ನಿಷೇಧಾಜ್ಞೆ ರದ್ದುಪಡಿಸುವಂತೆ ಪ್ರತಿಪಕ್ಷಗಳ ಒತ್ತಾಯ

Srinivas Rao BV

ಅಗರ್ತಲಾ: ಕೊರೊನವೈರಸ್ ಸೋಂಕು ಹರಡುವಿಕೆ ತಡೆಯಲು ಐವರು ಮತ್ತು ಹೆಚ್ಚಿನ ಜನ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್ 144ರಡಿ  ಮಾರ್ಚ್ 16 ರಾತ್ರಿ ತ್ರಿಪುರದಾದ್ಯಂತ ವಿಧಿಸಲಾಗಿರು ನಿಷೇಧಾಜ್ಞೆಯನ್ನು ವಾಪಸ್‍ ಪಡೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ

ಸರ್ಕಾರದ ಈ ಕ್ರಮ ಸಾಮಾನ್ಯ ಜನರಲ್ಲಿ ಆತಂಕ ಉಂಟುಮಾಡಿದೆ. ಜನರು ತಮ್ಮ ಹಕ್ಕಿನ ವಿರುದ್ಧ ಹೋರಾಡುವುದನ್ನು ಹತ್ತಿಕ್ಕುವ ಉದ್ದೇಶವೂ ಇದರಲ್ಲಿದೆ ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್  ಆರೋಪಿಸಿದ್ದಾರೆ. ಈ ತಿಂಗಳು ನಿರುದ್ಯೋಗಿಗಳಾಗುವ 10,323 ಹಂಗಾಮಿ ಶಿಕ್ಷಕರು ಸಭೆ ಸೇರುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ನಿಷೇಧಾಜ್ಞೆಯಂತಹ ಕ್ರಮಗಳನ್ನು ಎಲ್ಲೂ ಹೇರಿಲ್ಲ ಎಂದು ಅವರು ಹೇಳಿದ್ದಾರೆ.

SCROLL FOR NEXT